ಆ.15:ದರ್ಬೆ ನಯಾ ಚಪ್ಪಲ್ ಬಜಾರ್ ರವರಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯ ಬಹುಮಾನ ವಿತರಣೆ

0

ಪುತ್ತೂರು: ದರ್ಬೆ ಬುಶ್ರಾ ಟವರ್ಸ್ ನಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ರವರಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಆ.15 ರಂದು ನಯಾ ಚಪ್ಪಲ್ ಬಜಾರ್ ಮಳಿಗೆಯಲ್ಲಿ ಜರಗಲಿದೆ.


ಸ್ಪರ್ಧಿಗಳಿಗೆ 12 ಪ್ರಶ್ನೆಗಳನ್ನು ಈಗಾಗಲೇ ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಪ್ರಶ್ನೆಗೆ ಉತ್ತರವನ್ನು ಆ.13ರೊಳಗೆ ಅಂಚೆ ಮೂಲಕ ಉತ್ತರಿಸುವಂತೆ ಮಳಿಗೆ ಆಯೋಜಿಸಿತ್ತು. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದೊಂದಿಗೆ ಏಳು ಆಕರ್ಷಕ ಬಹುಮಾನಗಳನ್ನು ವಿಜೇತರಿಗೆ ನೀಡಲಾಗುತ್ತದ್ದು, ಒಂದಕ್ಕಿಂತ ಹೆಚ್ಚು ಸಮಾನ ಅಂಕಗಳು ಬಂದರೆ ವಿಜೇತರನ್ನು ಡ್ರಾ ಮೂಲಕ ನಿರ್ಧರಿಸಲಾಗುತ್ತದೆ.


ಮಳಿಗೆಯಲ್ಲಿ ಶುಕ್ರವಾರ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೊಳ್ವಾರು ಪ್ರಗತಿ ಪ್ಯಾರಾಮೆಡಿಕಲ್ ಇದರ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ, ರಾಜ್ಯ ಅಬಕಾರಿ ಇಲಾಖೆಯ ಪುತ್ತೂರು ಶಾಖೆಯ ಪ್ರೇಮಾನಂದ ಬಿ, ಸಿಂಚನ ಚಿಟ್ಸ್ ಪ್ರೈ.ಲಿಮಿಟೆಡ್ ನ ಪರಮೇಶ್ವರ ಗೌಡ, ಪ್ರಿಸಿಷನ್ ಕಾರ್ ಸೆಂಟರ್ ನ ಸುಜಿತ್ ಡಿ.ರೈ, ಬೊಳ್ವಾರು ಸ್ಮಾರ್ಟ್ ಸಾಪ್ಟ್ ವೇರ್ ಟೆಕ್ನೋಲಜೀಸ್ ನ ಸಾಪ್ಟ್ ವೇರ್ ಇಂಜಿನಿಯರ್ ಸತೀಶ್ ನಾಯಕ್ ಎಂ.ರವರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here