ಪುತ್ತೂರು: ಸರ್ವೆ ಕಲ್ಲಮ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ‘ಶ್ರೀ ರಾಮದರ್ಶನ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಆನಂದ ಸವಣೂರು, ತೆಂಕಬೈಲು ಗೋಪಾಲಕೃಷ್ಣ ಭಟ್, ಮಾ. ಸಮರ್ಥ ವಿಷ್ಣು ಈಶ್ವರಮಂಗಲ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಹನುಮಂತ), ಭಾಸ್ಕರ್ ಶೆಟ್ಟಿ ಸಾಲ್ಮರ ( ಅರ್ಜುನ ), ನಾ.ಕಾರಂತ ಪೆರಾಜೆ ( ವೃದ್ಧ ವಿಪ್ರ ) ಸಹಕರಿಸಿದರು.
ಶ್ರೀ ಮಠದ ವ್ಯವಸ್ಥಾಪಕ ಡಾ.ಸೀತಾರಾಮ ಭಟ್ ದಂಪತಿ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು. ಕಲಾಸಂಘ ಅಧ್ಯಕ್ಷ ಭಾಸ್ಕರ್ ಬಾರ್ಯ ವಂದಿಸಿದರು. ಮಠದ ಅರ್ಚಕ ಸುಧೀಂದ್ರ ಅಡಿಗ, ನಿರಂಜನ ಭಟ್ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು ಸಹಕರಿಸಿದರು.