ರಾಮಕುಂಜ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದ ವತಿಯಿಂದ ಕಡಬ ಮತ್ತು ಪುತ್ತೂರು ತಾಲೂಕಿನ ಎಂಡೋ ಸಂತ್ರಸ್ತರಿಗೆ ಉಚಿತ ಬಸ್ ಪಾಸ್ ವಿತರಣಾ ಶಿಬಿರ ಕೊಯಿಲ ಗ್ರಾಮ ಪಂಚಾಯತ್ನ ಸಹಕಾರದಲ್ಲಿ ಕೊಯಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ.13ರಂದು ನಡೆಯಿತು.
ಕಡಬ, ಆಲಂಕಾರು, ಕುಂತೂರು, ಪೆರಾಬೆ ಸವಣೂರು, ಹಿರೆಬಂಡಾಡಿ, ಉಪ್ಪಿನಂಗಡಿ, ಬಜತ್ತೂರು ಭಾಗಗಳಿಂದ ಸುಮಾರು 80 ಮಂದಿ ಎಂಡೋ ಸಂತ್ರಸ್ತರು ಶಿಬಿರಕ್ಕೆ ಆಗಮಿಸಿ, ಕರ್ನಾಟಕ ರಾಜ್ಯದಾದ್ಯಂತ ಪ್ರಯಾಣಿಸಲು ಉಚಿತ ಬಸ್ ಪಾಸ್ ಪಡೆದುಕೊಂಡರು. ಎಂಡೋ ಸಂತ್ರಸ್ತರು ಮತ್ತು ಪೋಷಕರು ಈ ಶಿಬಿರದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಾದ ನಾರಾಯಣ ನಾಯ್ಕ, ವಿಠಲ ಗೌಡ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ವಿಶೇಷಚೇತನರ ಪುನರ್ವಸತಿ ಕಾರ್ಯಕರ್ತರಾದ ಪೆರಾಬೆ ಗ್ರಾ.ಪಂ.ನ ಮುತ್ತಪ್ಪ ಬಿ, ಕೊಯಿಲ ಗ್ರಾ.ಪಂ.ನ ಅತೀಕಮ್ಮ, ರಾಮಕುಂಜ ಗ್ರಾ.ಪಂ.ನ ಚೇತನಾ, ಆಲಂಕಾರು ಗ್ರಾ.ಪಂ.ನ ಮೋನಪ್ಪ ಬಿ, ಬಜತ್ತೂರು ಗ್ರಾ.ಪಂ.ನ ಐಸಿಂತ ಪ್ರಜ್ವಲ್ ವೇಗಸ್, ಕೊಂಬಾರು ಗ್ರಾ.ಪಂ.ನ ಶಿಲ್ಪಕಲಾ ಸಹಕಾರ ನೀಡಿದರು. ಕೊಯಿಲ ಗ್ರಾ.ಪಂ.ವತಿಯಿಂದ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಿ ಸಹಕರಿಸಿದರು.
