ಪುತ್ತೂರು:ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ಈಶ್ವರಮಂಗಲದಿಂದ ವರದಿಯಾಗಿದೆ.
ಈ ಕುರಿತು ನೆ.ಮುಡ್ನೂರು ಗ್ರಾ.ಪಂ.ಕಚೇರಿ ಬಳಿ ಮಹಾಬಲೇಶ್ವರ ಭಟ್ ಎಂಬವರ ಪತ್ನಿ ಶೋಭಾ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ.‘ಆ.12ರಂದು ಬೆಳಿಗ್ಗೆ ತಾನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ಸಂಜೆ 7.30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಒಳಗೆ ಇದ್ದ ಗೋಡ್ರೇಜ್ನ ಬೀಗವನ್ನು ಮುರಿದು ಅದರಲ್ಲಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಒಳಗೆ ಇದ್ದ ಪರ್ಸನ್ನು ಓಪನ್ ಮಾಡಿ ಅದರಲ್ಲಿದ್ದ, ಸುಮಾರು 5 ವರ್ಷಗಳ ಹಿಂದೆ ಖರೀದಿ ಮಾಡಿದ ಸುಮಾರು 24 ಗ್ರಾಂ ತೂಕದ ಲಕ್ಷ್ಮೀ ಚೈನ್, ಪಟ್ಟೆಕಲ್ಲಿನ ಕಿವಿಯೋಲೆ 3 ಗ್ರಾಂ (1 ಜೊತೆ), ಜುಮುಕಿ -4 ಗ್ರಾಂ (1ಜೊತೆ) ಮತ್ತು ಸುಮಾರು 5000 ರೂ ಹಣವನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ.ಮನೆಯ ಹಿಂಬದಿ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದು ಕಳ್ಳತನವಾದ ಒಟ್ಟು 31 ಗ್ರಾಂ ಚಿನ್ನದ ಮೌಲ್ಯ 1 ಲಕ್ಷ 20 ಸಾವಿರ ಆಗಬಹುದು ಎಂದು ಶೋಭಾ ಅವರು ದೂರಿನಲ್ಲಿ ತಿಳಿಸಿದ್ದಾರೆ.ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.