ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಕ್ಯಾಡ್ ಎಂಎಸ್ ಟ್ರಸ್ಟ್-ಡಾ.ಶ್ರೀಧರ್ ಕೆ.ಸಿ ಹಾಗೂ ತಂಡ ಬೆಂಗಳೂರು, ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರ ಪುತ್ತೂರು, ಧನ್ವಂತರಿ ಲ್ಯಾಬ್ ಪುತ್ತೂರು ಇವುಗಳ ಆಶ್ರಯದಲ್ಲಿ ಹಿರಿಯ ನಾಗರಿಕರಿಗಾಗಿ ಉಚಿತ ನರ ಮತ್ತು ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದ ಮಧುಮೇಹ ತಪಾಸಣಾ ಶಿಬಿರವು ಆ.16 ರಂದು ಪುತ್ತೂರು ಆನೆಕೆರೆ ದೀಪಶ್ರೀ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರದಲ್ಲಿ ನಡೆಯಲಿದೆ.
ದ.ಕ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮನೀಷ್ ರವರು ಮುಖ್ಯ ಅತಿಥಿಗಳಾಗಿ, ನರರೋಗ ತಜ್ಞ ಡಾ.ಶ್ರೀಧರ್ ಕೆ.ಸಿರವರು ಶಿಬಿರದಲ್ಲಿ ಮಾಹಿತಿ ನೀಡಲಿದ್ದು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆಯುವಂತೆ ಸಂಘಟಕರಾದ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್ ರಾಜ್, ಕಾರ್ಯದರ್ಶಿ ಅಭೀಷ್ ಕೆ, ಸಮಾಜ ಸೇವಾ ನಿರ್ದೇಶಕ ಶರತ್ ಶ್ರೀನಿವಾಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.