ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆಯಾಗಿ ಚಂದ್ರಪ್ರಭಾ ಗೌಡ ನೀರ್ಪಾಡಿಯವರು ನೇಮಕಗೊಂಡಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯಂತೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಷಾ ಅಂಚನ್‌ರವರ ಆದೇಶದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ನೇಮಕಗೊಳಿಸಿದ್ದಾರೆ.
ನಿವೃತ್ತ ಯೋಧ ದಯಾನಂದ ಗೌಡ ನೀರ್ಪಾಡಿಯವರ ಪತ್ನಿಯಾಗಿರುವ ಚಂದ್ರಪ್ರಭಾ ಗೌಡರವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಪ್ರಸ್ತುತ ಚಂದ್ರಪ್ರಭಾರವರ ಬ್ಲಾಕ್ ಕಾಂಗ್ರೆಸ್‌ನ ವಕ್ತಾರೆಯಾಗಿರುವ ಇವರು ಪ್ರಸ್ತುತ ಸಾಲ್ಮರದಲ್ಲಿ ವಾಸ್ತವ್ಯವಿದ್ದಾರೆ.