ನಿಡ್ಪಳ್ಳಿ; ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇಲ್ಲಿ 79 ನೇ ದಿನಾಚರಣೆ ಪ್ರಯುಕ್ತ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಲಿನಿ.ಸಿ.ಎಚ್ ಧ್ವಜಾರೋಹಣ ಮಾಡಿದರು.
ನಂತರ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶಾಲಿನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರು ಹೇಮಾ. ಎನ್, ನಿವೃತ್ತ ಮುಖ್ಯ ಗುರು ಉದಯ ಕುಮಾರ್ ಶರವು, ಶ್ರೀ ಶಾಂತದುರ್ಗಾ ಸ್ಪೊರ್ಟ್ಸ್ ಕ್ಲಬ್ ಅಧ್ಯಕ್ಷ ಸತ್ಯನಾರಾಯಣ ಬೊಳುಂಬುಡೆ, ಕೋಟಿ ಚೆನ್ನಯ ಯುವಕ ಮಂಡಲ ತಂಬುತ್ತಡ್ಕ ಇದರ ಅಧ್ಯಕ್ಷ ವಿಜಿತ್ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಜಯಂತಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕಿಯರಾದ ಸುಮಾ.ಡಿ, ಸುಜಾತ.ಕೆ ಕಾರ್ಯಕ್ರಮ ನಿರೂಪಿಸಿದರು.ಪೋಷಕರು, ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.