ಪುತ್ತೂರು: ಸಾರ್ಯ ಅಲ್ ಅಮಲ್ ಜುಮಾ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಖತೀಬ್ ಅಬ್ದುಲ್ ನಾಸಿರ್ ರಝ್ವಿ ಪ್ರಾರ್ಥನೆ ನೆರವೇರಿಸಿದರು. ಸದರ್ ಹೈದರ್ ಹಾಶಿಮಿ ಹಾಗೂ ಜಮಾಅತ್ ಕಮಿಟಿಯವರು, ಖುತುಬಿಯತ್ ಕಮಿಟಿಯವರು, ಜಮಾಅತರು ಉಪಸ್ಥಿತರಿದ್ದರು.