ಪುಣ್ಚಪ್ಪಾಡಿ ನಡುಮನೆಗೆ ಆನೆ ದಾಳಿ : ಭತ್ತದ ಪೈರು ನಾಶ- ನಷ್ಟ

0

ಪುತ್ತೂರು: ಸವಣೂರು ಸಮೀಪದ ಪುಣ್ಚಪ್ಪಾಡಿ ನಡುಮನೆ ಎಂಬಲ್ಲಿಗೆ ಆ. 14 ರಂದು‌ ರಾತ್ರಿ ಆನೆಯೊಂದು ದಾಳಿ ನಡೆಸಿ, ಭತ್ತದ ಗದ್ದೆಯ ಪೈರನ್ನು ನಾಶ ಮಾಡಿದೆ ಎಂದು ವರದಿ ಆಗಿದೆ.

ಪುಣ್ಚಪ್ಪಾಡಿ ನಡುಮನೆ ವಿವೇಕ್ ಆಳ್ವರವರ ಭತ್ತದ ಗದ್ದೆಗೆ ನುಗ್ಗಿದ ಆನೆಯ ರಾಂಪಾಟದಿಂದ ಗದ್ದೆಯ ಒಂದು ಭಾಗ ಜೆಸಿಬಿಯಲ್ಲಿ ಮಣ್ಣು ಆಗೆದ ರೀತಿಯಲ್ಲಿ ಆಗಿದೆ. ಭತ್ತದ ಪೈರು ನಾಶದಿಂದ ಅಂದಾಜು‌ ಸುಮಾರು 20 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ವಿವೇಕ್ ಆಳ್ವರವರು ಸುದ್ದಿಗೆ ತಿಳಿಸಿದ್ದಾರೆ.

ಪುಣ್ಚಪ್ಪಾಡಿ ಪರಿಸರದಲ್ಲಿ ರಾತ್ರಿ ಆನೆಯ ಉಪಟಳದಿಂದ ಬಹಳಷ್ಟು ಮನೆಯವರು ಭಯಭೀತರಾಗಿದ್ದಾರೆ, ಆ. 14 ರಂದು ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಳೆದ 6 ತಿಂಗಳ ಹಿಂದೆ ಈ ಪ್ರದೇಶದಲ್ಲಿ ‌ಆನೆಯೊಂದು ಸಂಚಾರ ಮಾಡಿತ್ತು. ಆನೆಯನ್ನು ತಕ್ಷಣವೇ ಕಾಡಿಗೆ ಸ್ಥಳಾಂತರಗೊಳಿಸುವ ಕಾರ್ಯ ಆಗಬೇಕಾಗಿದೆ ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here