ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಎಲ್ಲರನ್ನೂ ಒಳಗೊಂಡ ಎಲ್ಲರಿಗೂ ಯೋಗ್ಯವಾದ ಪ್ರಪಂಚದ ಅತ್ಯುತ್ತಮ ಹಾಗೂ ಅತೀ ದೊಡ್ಡ ಸಂವಿಧಾನ ಭಾರತದ ಹೆಮ್ಮೆ.ಸಾವಿರಾರು ಕಲ್ಚರಲ್ ಗಳು ನೂರಾರು ಭಾಷೆಗಳ ಒಳಗೊಂಡ ಈ ದೇಶದ ಒಗ್ಗಟ್ಟು ಅದೊಂದು ಅದ್ಬುತ ವ್ಯವಸ್ಥೆಯಾಗಿದ್ದು ದೇಶದ ಈ ಪ್ರಧಾನ ಪ್ರಕ್ರಿಯೆಯನ್ನು ಕಾಪಾಡಿ ಸಂರಕ್ಷಿಸುವ ಮೂಲಕ ಭಾರತಾಂಬೆಯನ್ನು ಜಗತ್ತಿನ ಬಲಿಷ್ಠ ಶಕ್ತಿಯನ್ನಾಗಿ ಮಾರ್ಪಡಿಸೋಣ ಎಂದು ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಉಪಾಧ್ಯಕ್ಷ ಡಾ.ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಹೇಳಿದರು. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಂಎಚ್.ಕೆ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ ದ್ವಜಾರೋಹಣಗೈದು ಶುಭ ಹಾರೈಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಹಾಜಿ ಇಂದ್ರಾಜೆ, ಸದಸ್ಯ ಕರೀಂ ಹಾಜಿ ಕಾವೇರಿ, ಆಶಿಕುದ್ದೀನ್ ಅಖ್ತರ್, ಉಸ್ಮಾನ್ ಮುಸ್ಲಿಯಾರ್ ಕುಂಬ್ರ, ಅಬೂಬಕ್ಕರ್ ಮುಸ್ಲಿಯಾರ್ ಮುಕ್ಕೂರು, ಝಮೀರ್ ಖಾನ್ ಕೂರ್ನಡ್ಕ, ಪದವಿ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಕಡಬ, ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಸಂದ್ಯಾ ಪಿ, ಉಪಪ್ರಾಂಶುಪಾಲೆ ಪ್ರತಿಭಾ ರೈ, ಅಡ್ಮಿನಿಸ್ಟ್ರೇಶನ್ ಅಸಿಸ್ಟೆಂಟ್ ಶಬ್ನಾ ಹಾಗೂ ಉಪನ್ಯಾಸಕಿಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪದವಿಪೂರ್ವ ಮತ್ತು ಶರೀಅತ್ ವಿಭಾಗದ ವಿದ್ಯಾರ್ಥಿನಿಯರಾದ ಮುಫೀದಾ, ಅಫೀಝ, ಉನೈದ, ಸಫ್ನಾ, ಸಿದಾ, ತಶ್ಫಿಯಾ, ಮೆಹಕ್, ಝೋಯ,ಫಸ್ನಾ, ಮೆಹಶೂಕ, ಮೆಹಸೂಫ, ಮೆಹಶೂಕ ಮರಿಯಂ, ಸುಫೈರತ್, ತಸ್ನೀಮ, ಇಸ್ಮತ್, ಸಫ್ವಾನ ಮುಂತಾದವರು ಪ್ರಾರ್ಥನೆ ಮತ್ತು ರಾಷ್ಟ್ರ ಗೀತೆ ಹಾಡಿದರು.


LEAVE A REPLY

Please enter your comment!
Please enter your name here