ಪುತ್ತೂರು: ಪ್ರಗತಿ ಸ್ಪೆಷಲಿಟಿ ಹಾಸ್ಪಿಟಲ್ ಮತ್ತು ಪ್ರಗತಿ ಸಮೂಹ ಸಂಸ್ಥೆಗಳಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ರಮಾನಾಥ ರೈ ರವರು ಧ್ವಜಾರೋಹಣ ನೇರವೇರಿಸಿದರು.
ಪಾರಾ ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಲ್ಲಿರುವ ಅವಕಾಶಗಳನ್ನು ಉಪಯೋಗಿಸಿ ಭಾರತ ಮಾತೆಯ ಸೇವೆ ಮಾಡಲು ಯುವಕರು ಸೇನೆ ಸೇರುವಂತೆ ಉತ್ತೇಜಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಡಾ. ಯು ಶ್ರೀಪತಿ ರಾವ್ ಭಾರತೀಯರಾದ ಪ್ರತಿಯೊಬ್ಬರು ದೇಶಪ್ರೇಮವನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡಬೇಕು, ಅರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮವಾದದ್ದನು ಸಾಧಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಹಾಸ್ಪಿಟಲ್ ಎಜುಕೇಶನ್ ಟ್ರಸ್ಟನ ಟ್ರಷ್ಟಿ ಡಾ. ಸುಧಾ ಎಸ್ ರಾವ್, ಪಾರಾ ಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ನ ಆಡಳಿತಧಿಕಾರಿ ಪ್ರೀತಾ ಹೆಗ್ಡೆ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಅಲೈಡ್ ಹೆಲ್ತ್ ಸೈನ್ಸಸ್ ನ ಮಾನಸ ಪಾರಾ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲೆ ಚೈತ್ರ, ಸಂಸ್ಥೆಯ ಉಪನ್ಯಾಸಕರು,ಕಾಲೇಜು ಸಿಬ್ಬಂದಿಗಳು ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂದೇಶ್ ಮಸ್ಕರೆನ್ಹಸ್ ಸ್ವಾಗತಿಸಿ, ಅಶ್ರಿತಾ ವಂದಿಸಿದರು, ಅಶ್ವಿತಾ ಅತಿಥಿಗಳನ್ನು ಪರಿಚಯಿಸಿದರು. ಮೇಘಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಆಸ್ಪತ್ರೆಯ ಮತ್ತು ಕಾಲೇಜಿನ ಸಿಬ್ಬಂದಿಗಳು ಸಹಕರಿಸಿದರು.