ಆರ್ಲಪದವು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

0

ಪುತ್ತೂರು: ತಾಲೂಕು ಪಾಣಾಜೆ ಗ್ರಾಮದ ಆರ್ಲಪದವು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯು ವಿಜೃಂಭಣೆಯಿಂದ ಜರಗಿತು.

ಮಸೀದಿಯ ಖತೀಬರಾದ ಅಬ್ದುಲ್ ಸಲಾಂ ಅಮಾನಿ ಪ್ರಾರ್ಥನೆಯನ್ನು ನೆರವೇರಿಸಿ ಮಾತನಾಡುತ್ತಾ ನಾಡಿನಲ್ಲಿ ಶಾಂತಿ ಸೌಹಾರ್ದವನ್ನು ನಡೆಸಲು ಸರ್ವರೂ ಪ್ರಯತ್ನಿಸಬೇಕು ಎಂದು ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ಜಮಾಅತ್ ಆಡಳಿತ ಸಮಿತಿ ಕಾರ್ಯಾಧ್ಯಕ್ಷರಾದ ಎನ್ ಎಸ್ ಯೂಸುಫ್ ನೆಲ್ಲಿತ್ತಿಮ್ಮಾರ್ ಧ್ವಜಾರೋಹಣಗೈದರು . ಪುತ್ತೂರು ತಾಲೂಕು ಸೀರತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಡಾ.ಹಾಜಿ.ಎಸ್ ಅಬೂಬಕರ್ ಆರ್ಲಪದವು ಸಂದರ್ಭೋಚಿತವಾಗಿ ಮಾತನಾಡಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಕೆ ಅಬೂಬಕ್ಕರ್ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಸದರ್ ಉಸ್ತಾದ್ ಶರೀಫ್ ಬದರಿ ಆಡಳಿತ ಸಮಿತಿ ಕೋಶಾಧಿಕಾರಿ ಕೆ ಎಂ ಆಲಿ ಉಪಾಧ್ಯಕ್ಷರಾದ ಎ ಕೆ ಮುಹಮ್ಮದ್ ಕುಂಞ ಹಾಜಿ ಜೊತೆ ಕಾರ್ಯದರ್ಶಿ ಹಮೀದ್ ಎಣ್ಣಗದ್ದೆ ಪಾಣಾಜೆ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಉಮ್ಮರ್ ಜನಪ್ರಿಯ ಹಾಗೂ ಜಮಾಅತರು ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here