ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಬಿ ಕೊಡಂಗೆಯವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಗ್ರಾ.ಪಂ.ಉಪಾಧ್ಯಕ್ಷ ಜಯಂತ ಅಬೀರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಗ್ರಾ.ಪಂ.ಸದಸ್ಯರಾದ ವಿಠಲ ಗೌಡ ಅಗಳಿ, ಲೋಹಿತಾಕ್ಷ ಕೆಡೆಂಜಿಕಟ್ಟ, ಮೋಹನ್ ಅಗಳಿ, ಜಯರಾಮ ಬೆಳಂದೂರು, ಪ್ರವೀಣ್ ಕೆರೆನಾರು ಹರಿಣಾಕ್ಷಿ ಬನಾರಿ, ಗೌರಿ ಮಾದೋಡಿ, ಪಾರ್ವತಿ ಮರಕ್ಕಡ, ಗೀತಾ ಕುವೆತ್ತೋಡಿ, ತಾರಾ ಅನ್ಯಾಡಿ, ಉಮೇಶ್ವರಿ ಅಗಳಿ, ಕುಸುಮಾ ಅಂಕಜಾಲು, ಲೆಕ್ಕ ಸಹಾಯಕಿ ಸುನಂದಾ, ಸಿಬ್ಬಂದಿಗಳಾದ ಮಮತಾ, ಗೀತಾ, ಹರ್ಷಿತ್, ಸಂತೋಷ್, ವಿಮಲಾ, ಪ್ರಶಾಂತಿ ಮತ್ತಿತರರು ಉಪಸ್ಥಿತರಿದ್ದರು.