ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ ಎಂ ಹನೀಫ್ ರೆಂಜಲಾಡಿ ಧ್ವಜಾರೋಹಣಗೈದು ಮಾತನಾಡಿ ಜಾತಿ ಮತ ಬೇಧ ಮರೆತು ಸೌಹಾರ್ದತೆಯಿಂದ ಬದುಕಿ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ನುಡಿದರು. ಶಾಲಾ ಮುಖ್ಯಗುರು ಶ್ರೀಮತಿ ಕಮಲ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು.

ಸವಣೂರು ಪದವಿಪೂರ್ವ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲರಾದ ಬಿ ವಿ ಸೂರ್ಯನಾರಾಯಣ ಕಣ್ಣರಾಯ, ಧಾರ್ಮಿಕ ದತ್ತಿ ಇಲಾಖೆ ಇದರ ಜಿಲ್ಲಾ ನಿರ್ದೇಶಕರಾದ ಶಿವನಾಥ್ ರೈ ಮೇಗಿನಗುತ್ತು, ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಕರುಣಾಕರ ಗೌಡ ಎಲಿಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ರೆಂಜಲಾಡಿ, ಆರ್ ಐ ಸಿ ಚೇರ್ಮನ್ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷ ಸುಂದರ ಬಲ್ಯಾಯ ನೆಕ್ಕಿಲು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಂಚಾಯತ್ ಸದಸ್ಯರಾದ ರಸಿಕ ರೈ ಮೇಗಿನಗುತ್ತು, ರೆಂಜಲಾಡಿ ಜಮಾತ್ ಕಾರ್ಯದರ್ಶಿ ಜೈನುದ್ದೀನ್ ಹಾಜಿ ಜೆ ಎಸ್, ಹನುಮಾನ್ ಫ್ರೆಂಡ್ಸ್ ಕಲ್ಪಣೆ ಅಧ್ಯಕ್ಷ ಹೇಮರಾಜ್ ರೆಂಜಲಾಡಿ, ಅಡಿಕೆ ವರ್ತಕ
ಸಂಘದ ಜಿಲ್ಲಾ ಸದಸ್ಯ ಇಬ್ರಾಹಿಂ ಅಜ್ಜಿಕಲ್ಲು ಹಾಗೂ ನಾಡಿನ ವಿದ್ಯಾಭಿಮಾನಿಗಳು, ವಿದ್ಯಾರ್ಥಿ ಪೋಷಕರು, ಎಸ್ಡಿಎಂಸಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಮೀನಾಕ್ಷಿ ಸೊರಕೆ, ಎಸ್ ಡಿ ಎಮ್ ಸಿ ಸದಸ್ಯರಾದ ಗಣೇಶ್ ನೆರೋಲ್ತಡ್ಕ, ಚಂದ್ರ ಶೇಖರ್ ನೆಕ್ಕಿಲು, ಬಶೀರ್ ಪರಾಡ್, ಜಯಪ್ರಕಾಶ್ ಶೆಟ್ಟಿ ರೆಂಜಲಾಡಿ, ಹಂಝ ಕೂಡುರಸ್ತೆ ಹಾಗೂ ಸರ್ವ ಸದಸ್ಯರು ಸಹಕರಿಸದರು.
ಶಿಕ್ಷಕಿಯರಾದ ಉಮಾವತಿ ರೈ ರೆಂಜಲಾಡಿ, ಅನಿತಾ ಶೆಟ್ಟಿ, ಅವಿತಾ ರೈ ವಿವಿಧ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಶಿಕ್ಷಕಿ ದೀಕ್ಷಾ ರೈ ವಂದನಾರ್ಪಣೆಗೈದು ಶಿಕ್ಷಕಿ ಜ್ಯೋತಿ ಸಿ ಜೆ ಕಾರ್ಯಕ್ರಮ ನಿರೂಪಣೆಗೈದರು ವಿದ್ಯಾರ್ಥಿಗಳಿಂದ ವೈವಿಧ್ಯಮಯ ವಿವಿಧ ಕಾರ್ಯಕ್ರಮಗಳು ಜರುಗಿತು.ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವಿದ್ಯಾಭಿಮಾನಿಗಳ ವತಿಯಿಂದ ಸಿಹಿ ತಿಂಡಿ ಹಾಗೂ ಪಾನೀಯಗಳ ವ್ಯವಸ್ಥೆಯನ್ನು ಮಾಡಲಾಯಿತು.ಅಡುಗೆ ಸಿಬ್ಬಂದಿಗಳು ಸಹಕರಿಸಿದರು.