ಚಾರ್ವಾಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

0

ಕಾಣಿಯೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಾರ್ವಾಕ ದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕ ಮಾಸ್ಟರ್ ಯಶ್ವಿನ್ ಇವರ ನೇತೃತ್ವದಲ್ಲಿ ಆಕಷ೯ಕ ಪಥಸಂಚಲನದ ಮೂಲಕ ಗಣ್ಯರಿಗೆ ಧ್ವಜವಂದನೆಯನ್ನು ನೀಡಲಾಯಿತು. ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಮೂರುರವರು ಧ್ವಜಾರೋಹಣವನ್ನು ನೆರವೇರಿಸಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.ಮೆರವಣಿಗೆ ಮೂಲಕ ಸ್ವಾತಂತ್ರ್ಯ ಚಳುವಳಿಯ ಉದ್ಘೋಷಣೆಗಳನ್ನು ಮೊಳಗಿಸಿದರು. ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಸಾರುವ ಭಾಷಣ, ಮೈಮ್ ಶೋ, ಸಮೂಹಗಾಯನ,ನೃತ್ಯ ವೈವಿಧ್ಯ ನಡೆಯಿತು.

ಶಾಲಾ ಮುಖ್ಯಗುರು ರಮೇಶ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟಿಜಿಟಿ ಶಿಕ್ಷಕರಾದ ಚೆನ್ನಪ್ಪ ಗೌಡರವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಆಶಾಲತಾರವರು ಕಾಯ೯ಕ್ರಮ ನಿರೂಪಿಸಿದರು. ಜಿಪಿಟಿ ಶಿಕ್ಷಕಿ ನಯನ ಮತ್ತು ಅತಿಥಿ ಶಿಕ್ಷಕಿ ಕು. ಜೀವಿತಾರವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿವ೯ಹಿಸಿದರು. ಗೌರವ ಶಿಕ್ಷಕಿ ಶ್ವೇತಾರವರು ವಂದಿಸಿದರು.

ನಿವೃತ್ತ ಮುಖ್ಯಗುರು ಜನಾರ್ದನ ಮಾಸ್ತರ್ ಇಡ್ಯಡ್ಕ, ಚಾರ್ವಾಕ ಸಿ ಎ ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ,ಎಸ್ ಡಿ ಎಂಸಿ ನಿಕಟಪೂರ್ವ ಅಧ್ಯಕ್ಷರುಗಳಾದ ಕೊರಗಪ್ಪ ಗೌಡ ಕುಕ್ಕುನಡ್ಕ, ಗೋಪಾಲಕೃಷ್ಣ ಬಾರೆಂಗಳ, ರಾಮಣ್ಣ ಗೌಡ ಪೊನ್ನೆತ್ತಡಿ, ಚಾವಾ೯ಕ ಅಂಚೆ ಸಿಬ್ಬಂದಿ ನಾರಾಯಣ ಗೌಡ ಕೋಲ್ಪೆ, ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ,ಗ್ರಾಮ ಪಂಚಾಯತ್ ಸದಸ್ಯರಾದ ಮೀರಾ ಕಳೆಂಜೋಡಿ, ಸುಲೋಚನಾ ಮೀಯೊಳ್ಪೆ, ತೇಜಸ್ವಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಭಾಸ್ಕರ ಗೌಡ ಇಡ್ಯಡ್ಕ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸಾರಿಕಾ ದೇವರತ್ತಿಮಾರು, ಎಸ್ ಡಿ ಎಂ ಸಿ ಸದಸ್ಯರು, ಚಾರ್ವಾಕ ಅಂಗನವಾಡಿ ಕಾರ್ಯಕರ್ತೆ ಶಾರದಾ, ಶಿವಗೌರಿ ಮತ್ತು ಪ್ರಗತಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು ಪದಾಧಿಕಾರಿಗಳು,ಹಿರಿಯ ವಿದ್ಯಾರ್ಥಿಗಳು, ಪೋಷಕರು,ಊರ ಮಹನೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here