ಪುತ್ತೂರು: ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಪುತ್ತೂರು ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ಪುರ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ ಸಂದೇಶ ನೀಡಿದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ್ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಧೀಶ ದೇವರಾಜ್, ಹಿರಿಯ ನ್ಯಾಯವಾದಿ ಶ್ರೀರಾಮ್ ಮೋಹನ್ ರಾವ್, ಜಗನ್ನಿವಾಸ್ ರಾವ್, ಮಹೇಶ್ ಕಜೆ ಮಾತನಾಡಿದರು. ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಧೀಶ ಯೋಗೇಂದ್ರ ಶೆಟ್ಟಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಣ್ಣ, ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ ಕೆ.ವಿ., ನ್ಯಾಯವಾದಿಗಳಾದ ಎಂ.ಜಿ ಗೋಪಾಲಕೃಷ್ಣ ಭಟ್, ಈಶ್ವರ ಭಟ್, ಶಿವಪ್ರಸಾದ್, ಉದಯ್ ಕುಮಾರ್ ಶೆಟ್ಟಿ, ದೇವಾನಂದ, ನಾಗರಾಜ್, ನೂರುದ್ದೀನ್ ಸಾಲ್ಮರ, ಕೃಷ್ಣವೇಣಿ, ಪ್ರವೀಣ್ ಕುಮಾರ್, ಸಿದ್ದೀಕ್, ಮಾಧವ ಪೂಜಾರಿ ಹಾಗೂ ನ್ಯಾಯವಾದಿಗಳು, ಸರಕಾರಿ ಅಭಿಯೋಜಕರುಗಳು, ನ್ಯಾಯಾಲಯದ ಸಿಬ್ಬಂದಿಗಳು ಹಾಜರಿದ್ದರು. ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ ಸ್ವಾಗತಿಸಿ, ಕೋಶಾಧಿಕಾರಿ ಮಹೇಶ್ ಕೆ. ಸವಣೂರು ವಂದಿಸಿದರು. ಪುತ್ತೂರು ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ರಾಮಕೃಷ್ಣ ಕೆ. ರವರ ನೇತೃತ್ವದಲ್ಲಿ ಪೋಲಿಸ್ ಪರೇಡ್ ನಡೆಸಲಾಯಿತು.