ಪುತ್ತೂರು: ಪಾಣಾಜೆ ವಲಯ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮವು ಪುಷ್ಪರಾಜ್ ಶೆಟ್ಟಿ ಕೋಟೆ ಅವರ ಮನೆಯಲ್ಲಿ ಜರಗಿತು.
ಪ್ರತಿ ಗ್ರಾಮಮಟ್ಟದಲ್ಲಿ ವಲಯ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿ ಅಲ್ಲಿಯ ನಿವೃತ್ತ ಯೋಧರನ್ನು ಗುರುತಿಸಿ ಅವರನ್ನು ಗೌರವಿಸುವ ಸನ್ಮಾನಿಸುವ ಕಾರ್ಯಕ್ರಮ ಶಾಸಕ ಅಶೋಕ್ ಕುಮಾರ್ ರೈ ಯವರ ನಿರ್ದೇಶನದಂತೆ ಬ್ಲಾಕ್ ಕಾಂಗ್ರೆಸ್ ನ ಸೂಚನೆಯಂತೆ ಪಾಣಾಜೆ ವಲಯ ಕಾಂಗ್ರೆಸ್ ವತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ಪುಷ್ಪರಾಜ್ ಶೆಟ್ಟಿ ಕೋಟೆ, ಪತ್ನಿ ಜ್ಯೋತಿ ಹಾಗೂ ತಾಯಿ ಲೀಲಾವತಿಯವರನ್ನು ಸನ್ಮಾನಿಸಲಾಯಿತು. ನಿವೃತ್ತ ಯೋಧ ಪುಷ್ಪರಾಜ್ ಶೆಟ್ಟಿ ಕೋಟೆ ಕಳೆದ ದಿನಗಳನ್ನು ಮೆಲುಕು ಹಾಕಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೈಮೂನತುಲ್ ಮೆಹ್ರಾ ಸದಸ್ಯರಾದ ನಾರಾಯಣ ನಾಯಕ್, ವಿಮಲಾ , ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಪಿ ಜಿ ಶಂಕರ್ ನಾರಾಯಣ ಭಟ್ ಪಾಣಾಜೆ ಮತ್ತು ಡಾ. ಹಾಜಿ .ಎಸ್ ಅಬೂಬಕರ್ ಆರ್ಲಪದವು, ಪಾಣಾಜೆ ವಲಯ ಕಾಂಗ್ರೇಸ್ ನಿಕಟ ಪೂರ್ವ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ರೈ ಕೆದಂಬಾಡಿ ಬೂತ್ ಅಧ್ಯಕ್ಷರುಗಳಾದ ಶ್ರೀನಿವಾಸ ಭರಣ್ಯ , ಸಲೀಂ ತೋಡುಬಳಿ ಮುಖಂಡರಾದ ಕೆ ಎ ಆಲಿ ಕಂಚಿಲ್ಕುಂಜ , ನಾರಾಯಣ ನಾಯ್ಕ ನಡುಮನೆ , ನ್ಯಾಯವಾದಿ ಕಿರಣ್ ನಡುಮನೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀ ಪ್ರಸಾದ್ ಪಾಣಾಜೆ ಸ್ವಾಗತಿಸಿದರು , ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸದಾನಂದ ನಾಯ್ಕ ಭರಣ್ಯ ವಂದಿಸಿದರು.