ನರಿಮೊಗರು: ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ-ಅಡುಗೆ ಸಿಬ್ಬಂದಿಗೆ ಬೀಳ್ಕೊಡುಗೆ

0

ಸಿಬ್ಬಂದಿ ವಿಜಯಾ ಅವರ ಹೆಸರಿನಲ್ಲಿ ಠೇವಣಿ ಇಟ್ಟು ಬೀಳ್ಕೊಡುಗೆ

ನರಿಮೊಗರು: ನರಿಮೊಗರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಿವೃತ್ತ ಅಡುಗೆ ಸಿಬ್ಬಂದಿಯನ್ನು ವಿಶೇಷವಾಗಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.

ನರಿಮೊಗರು ಶಾಲೆಯಲ್ಲಿ 13ವರ್ಷಗಳ ಕಾಲ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ವಿಜಯಾ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಹಾರ ಫಲಪುಷ್ಪದೊಂದಿಗೆ ಸನ್ಮಾನಿಸುವುದಲ್ಲದೆ ವಿಜಯಾ ಅವರ ಹೆಸರಿನಲ್ಲಿ ಠೇವಣಿ ಇಟ್ಟು ಅದರ ಠೇವಣಿ ಮೊತ್ತದ ಪತ್ರವನ್ನು ನೀಡಿ ಬೀಳ್ಕೊಡಲಾಯಿತು.

ಶಾಲಾ ಮುಖ್ಯಶಿಕ್ಷಕಿ  ಶ್ರೀಲತಾ ರೈಯವರ ಈ ವಿಶಿಷ್ಟ ಯೋಜನೆಗೆ ಶಿಕ್ಷಕರು ಹಾಗೂ ಎಸ್ ಡಿ ಎಂ ಸಿ ಸದಸ್ಯರು ಹಾಗೂ ದಾನಿಗಳ ಸಂಪೂರ್ಣ ಸಹಕಾರ ದೊರೆತಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಅವರು ವಹಿಸಿದ್ದರು. ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ್, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಎನ್ ಎಸ್ ಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಂಗಾಧರ ಸುವರ್ಣ, ಕಾರ್ಯದರ್ಶಿ ಶರತ್ ಚಂದ್ರ ಬೈಪಾಡಿತ್ತಾಯ, ಊರ ಗಣ್ಯರಾದ ಜಯರಾಮ ಪೂಜಾರಿ, ಮಹಮ್ಮದ್ ಹಾಜಿ ದರ್ಖಾಸು,ಎಸ್ ಡಿಎಂಸಿ ಮಾಜಿ ಅಧ್ಯಕ್ಷರಾದ ಉಸ್ಮಾನ್ ನೆಕ್ಕಿಲು,ಜಗದೀಶ್ ರಾವ್, ನವಾಝ್ ಪಳ್ಳತ್ತಾರು, ಶಾಲಾ ಸುರಕ್ಷಾ ಸಮಿತಿ ಸದಸ್ಯರಾದ ಸಲೀಂ ಮಾಯಂಗಳ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯ.ಕೆ.ಹಾಗೂ ಎಸ್ ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here