ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರೌಢ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರೌಢ ಶಾಲೆ ಪುತ್ತೂರು,ನಗರ ಇಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಆಚರಿಸಲಾಯಿತು.


ಎಸ್ ಡಿಎಂಸಿ ಕಾರ್ಯಾಧ್ಯಕ್ಷ ಪಂಚಾಕ್ಷರಿ ಅವರು ಧ್ವಜಾರೋಹಣವನ್ನು ನೆರವೇರಿಸಿ, ಶುಭಹಾರೈಸಿದರು.
ಎಸ್ ಡಿಎಂಸಿ ಯ ಸದಸ್ಯರಾದ ದಿನೇಶ್ ಕಾಮತ್, ಬಾಲಚಂದ್ರ ಎ, ಅಮಿತಾ, ಜಯಾ ಪಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಚೇತನ್, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಜಲಜಾಕ್ಷಿ ಕೆ ಎಂ ಸ್ವಾಗತಿಸಿ, ಕಲಾ ಶಿಕ್ಷಕಿ ನಳಿನಿ ಎ ವಂದಿಸಿದರು.
ಹಿಂದಿ ಶಿಕ್ಷಕರಾದ ಅಬ್ರಹಾಂ ಎಸ್ ಎ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸವಿತಾ ಯು ಆರ್, ಪ್ರಮೀಳಾ ಬಿ ಕೆ, ಡಾ.ಚಾಂದಿನಿ, ನಾರಾಯಣ ನಾಯ್ಕ್ ಎ, ವೀಣಾ ಎ ವಿ ಸಹಕರಿಸಿದರು.

LEAVE A REPLY

Please enter your comment!
Please enter your name here