ಪುತ್ತೂರು: ಮೇನಾಲ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಧ್ವಜಾರೋಹಣವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ದುಲ್ಲಾ ಮೆಣಸಿನಕಾನ ನೆರವೇರಿಸಿದರು. ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ರಾಮ ಮೇನಾಲ ಸಭಾಧ್ಯಕ್ಷತೆ ವಹಿಸಿದ್ದರು.ಪಂಚಾಯತ್ ನ ಸದಸ್ಯರಾದ ವೆಂಕಪ್ಪ ನಾಯ್ಕ, ಪಂಚಾಯತ್ ಸದಸ್ಯೆಯಾದ ಲಲಿತಾ, ಶಾಲಾ ಎಸ್ ಡಿ ಎಂ ಸಿಯ ಮಾಜಿ ಅಧ್ಯಕ್ಷ ಕೆ. ಎಂ. ಮಹಮ್ಮದ್ ಹಾಗೂ ಸುರೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇನಾಲ ಘಟಕದ ಅಧ್ಯಕ್ಷರು ಮತ್ತು ಸದಸ್ಯರು, ಎಸ್ ಎಸ್ ಎಫ್ ಘಟಕ ಮೇನಾಲ ಘಟಕ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು,ಎಸ್ ಕೆ ಎಸ್ ಎಸ್ ಘಟ ಮೇನಾಲ ಘಟಕದ ಅಧ್ಯಕ್ಷರು ಸರ್ವ ಸದಸ್ಯರು ಶುಭ ಹಾರೈಸಿದರು.
ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ತೇಜಸ್ವಿನಿ ಕುಕ್ಕುಡೇಳು – ನೃತ್ಯ ಗುರುಗಳು ಸಮರ್ಥ ನೃತ್ಯ ತಂಡ, ಶಿವಪ್ಪ ಪೂಜಾರಿ ನಿಸರ್ಗ ಬೇಕರಿ ಮಾಲಕರು ಇವರು ಬಹುಮಾನವನ್ನು ಪ್ರಾಯೋಜಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಲ್ಲ ಎಂ ಮೆನಾಲ, ಅಶ್ರಫ್ ಪಳ್ಳತ್ತೂರು, ಎಸ್ ಎಸ್ ಎಫ್ ಮೇನಾಲ ಘಟಕ ಇವರ ವತಿಯಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು. ಶಾಲಾ ಎಸ್ ಡಿ ಎಂ ಸಿಯ ಮಾಜಿ ಅಧ್ಯಕ್ಷರು, ಸದಸ್ಯರುಗಳು, ಹಿರಿಯ ವಿದ್ಯಾರ್ಥಿಗಳು, ಊರವರು, ವಿದ್ಯಾಭಿಮಾನಿಗಳು ಹಾಜರಿದ್ದರು ಕಾರ್ಯಕ್ರಮದಲ್ಲಿ ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ರಾಮಮೇಲಾಲ ಸದಸ್ಯರಾದ ವೆಂಕಪ್ಪ ನಾಯ್ಕ,ಹಾಗೂ ಲಲಿತಾ, ಧ್ವನಿ ವರ್ಧಕವನ್ನು ಪ್ರಾಯೋಜಿಸಿ ಸಹಕರಿಸಿದ ಉದ್ಯಮಿ ಅಬ್ಬಾಸ್ ರಾಯಲ್ ಶಾಮಿಯಾನ, ಸೇವಾ ಪ್ರತಿನಿಧಿ ಶ್ರೀ ಸುಂದರ ಜಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇನಾಲ ಘಟಕ ಇವರನ್ನು ಗೌರವಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಯ ಉಪಾಧ್ಯಕ್ಷೆ ಸುಮಿತ್ರ, ಹಾಗೂ ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ ಶೈಲಜಾ ಕೆ ಆರ್, ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಜಲಜ ಕೆ ಸ್ವಾಗತಿಸಿ, ಹಿರಿಯ ಶಿಕ್ಷಕಿ ರಾಜವಿ ಎ ಹಾಗೂ ಶಿಕ್ಷಕಿ ಆಶಾಲತಾ ವಂದಿಸಿದರು. ಶಿಕ್ಷಕಿ ವಾಣಿ ಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಲತಾ, ಸವಿತಾ ಸಹಕರಿಸಿದರು ಶಾಲಾ ಅಕ್ಷರ ದಾಸೋಹ ಸಿಬ್ಬಂದಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.