ಪುತ್ತೂರು: ಎಂಪೆಕಲ್ಲು ನೂರುಲ್ ಹುದಾ ಮದ್ರಸ ವಠಾರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಎಂಪೆಕಲ್ಲು ಮದ್ರಸ ಅಧ್ಯಕ್ಷ ಕುಂಞಿಪ್ಪ ಹಾಜಿ ಧ್ವಜಾರೋಹಣಗೈದರು. ಸ್ಥಳೀಯ ಮದ್ರಸದ ಸದರ್ ಮುಅಲ್ಲಿಂ ಸ್ವಾದಿಕ್ ಮುಸ್ಲಿಯಾರ್ ಕಟ್ಟತ್ತಾರು ದುವಾ ಹಾಗೂ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮದ್ರಸ ಕಮಿಟಿಯ ಉಪಾಧ್ಯಕ್ಷ ಹಸೈನಾರ್ ಹಾಜಿ, ಕೋಶಾಧಿಕಾರಿ ಅಬ್ದುಲ್ಲಾ ನಿಡ್ಪಳ್ಳಿ, ಜೊತೆ ಕಾರ್ಯದರ್ಶಿ ಅಮೀರ್ ಹಾಜಿ, ಮದ್ರಸ ಕಮಿಟಿಯ ಸದಸ್ಯರುಗಳಾದ ರಝಾಕ್ ಹಾಜಿ ಹಾಗೂ ಬಶೀರ್ ಎಂಪೆಕಲ್ಲು, ಇಸ್ಮಾಯಿಲ್ ಕೂಟೇಲು, ಇರ್ಶಾದ್ ಎಂಪೆಕಲ್ಲು, ನೌಫಲ್, ಬಾಸಿಲ್, ಪೋಷಕರು ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮದ್ರಸ ವಿದ್ಯಾರ್ಥಿಗಳಿಂದ ವಿಶೇಷ ಅಸೆಂಬ್ಲಿ ಹಾಗೂ ರಾಷ್ಟ್ರಗೀತೆ, ಪ್ರತಿಜ್ಞಾ ವಿಧಿ ಬೋಧನೆ ಹಾಗೂ ದೇಶ ಭಕ್ತಿ ಗೀತೆ ನಡೆಯಿತು. ಮದ್ರಸ ಕಮಿಟಿಯ ಕಾರ್ಯದರ್ಶಿ ಅಶ್ರಫ್ ಕುಕ್ಕುಪುಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.