ಸ್ನೇಹ ಯುವಕ, ಯುವತಿ ಮಂಡಲ ಸಾರಥ್ಯ
21 ನೇ ವರ್ಷದ ಸಂಭ್ರಮ
ಪುತ್ತೂರು: ಪರ್ಪುಂಜದ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಯುವತಿ ಮಂಡಲದ ಸಾರಥ್ಯದಲ್ಲಿ ಕಳೆದ 21 ವರ್ಷಗಳಿಂದ ಪರ್ಪುಂಜದ ರಾಮಜಾಲು ಗರಡಿ ವಠಾರದಲ್ಲಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಠಮಿ ಆ.15 ರಂದು ವೈಭವದಿಂದ ಜರಗಿತು. ಬೆಳಿಗ್ಗೆ ಉಪನ್ಯಾಸಕರಾದ ಹರ್ಷಿತ್ ಕುಮಾರ್ ಕೂರೇಲುರವರು ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿ ಶುಭ ಹಾರೈಸಿದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಯುವಕ ಮಂಡಲದ ಗೌರವ ಸಲಹೆಗಾರರಾದ, ಪ್ರಗತಿಪರ ಕೃಷಿಕ ಬಾರಿಕೆ ನಾರಾಯಣ ರೈಯವರು ಧ್ವಜಾರೋಹಣ ನೆರವೇರಿಸಿ ೭೯ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದೇಶ ಸಾರಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ಸುಧಾಕರ ರೈ ಕುಂಬ್ರ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅತಿಥಿಗಳಾಗಿ ಪರ್ಪುಂಜ ಅಮರ್ ಚಿಕನ್ ಸೆಂಟರ್ ಮಾಲಕ ಶ್ರೀಧರ ಪೂಜಾರಿ ಪಿದಪಟ್ಲ, ಸ್ನೇಹ ಯುವಕ ಮಂಡಲದ ಗೌರವ ಸಲಹೆಗಾರ ಮಿತ್ರದಾಸ ರೈ ಡೆಕ್ಕಳ, ಗೌರವ ಅಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ ಭಾಗವಹಿಸಿದ್ದರು. ರಾಜೇಶ್ ರೈ ಪರ್ಪುಂಜ ಸ್ವಾಗತಿಸಿ, ಸ್ನೇಹ ಯುವತಿ ಮಂಡಲದ ಅಧ್ಯಕ್ಷ ಪ್ರಮೀಳಾ ಎಸ್. ವಂದಿಸಿದರು. ರತನ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕರಾದ ಸಹಜ್ ರೈ ಬಳಜ್ಜ, ಸಿಝ್ಲರ್‌ನ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಚಿನ್ನದ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಪ್ರವೀಣ್ ರೈ ನಡುಕೂಟೇಲು, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಕೊಲತ್ತಡ್ಕ ಶಿವಕೃಪಾ ಅಡಿಟೋರಿಯಂ ಮಾಲಕ ಗಣೇಶ್ ಕೋಡಿಬೈಲು, ಸಂಟ್ಯಾರು ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಶರತ್ ಆಳ್ವ, ಅರ್ಚಕರಾದ ಹರೀಶ್ ಶಾಂತಿ, ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ, ಕಾರ್ಪಾಡಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಆರ್ಯಾಪು ಕಾಂಗ್ರೆಸ್ ವಲಯ ಅಧ್ಯಕ್ಷ ಗಿರೀಶ್ ರೈ ಮೂಲೆ, ಉಪನ್ಯಾಸಕಿ ತೃಪ್ತಿ ರತನ್ ರೈ ಕುಂಬ್ರ, ಪ್ರಗತಿಪರ ಕೃಷಿಕ ಅನಿಲ್ ರೈ ಬಾರಿಕೆ, ಕಿರಣ್ ರೈ ಪುಂಡಿಕಾಯಿ, ಪೊಲೀಸ್ ಕಾನ್ಸ್‌ಸ್ಟೇಬಲ್ ಹರೀಶ್, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಯುವತಿ ಮಂಡಲದ ಗೌರವ ಅಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ಪ್ರಮೀಳಾ ಎಸ್, ಕಾರ್ಯದರ್ಶಿ ರೇಖಾ ಎಸ್ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು. ರಕ್ಷಾ, ವರ್ಷಾ ಪ್ರಾರ್ಥಿಸಿದರು. ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲದ ಗೌರವ ಸಲಹೆಗಾರ ರಾಜೇಶ್ ರೈ ಪರ್ಪುಂಜ ಸ್ವಾಗತಿಸಿದರು. ಶಿಕ್ಷಕಿ ಭವ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ ಕಾರ್ಯಕ್ರಮ
ಸಾಧನೆ ಮಾಡಿದ ಇಬ್ಬರು ಸಾಧಕರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಅಗ್ನಿಪಥ್‌ಗೆ ಆಯ್ಕೆಯಾದ ರಕ್ಷಿತ್ ಡಿ.ಜಿ ಗಡಾಜೆ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ದಿನಕ ಕೆ ಮಡ್ತಿಲರವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆಗಳು
ವಿಶೇಷವಾಗಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು. ಪುರುಷರ ಹಗ್ಗ ಜಗ್ಗಾಟದಲ್ಲಿ 16 ತಂಡಗಳು ಭಾಗವಹಿಸಿದ್ದು ಇದರಲ್ಲಿ ಪುರುಷರ ವಿಭಾಗದಲ್ಲಿ ಶ್ರೀ ಸದಾಶಿವ ಫ್ರೆಂಡ್ಸ್ ಕ್ಲಬ್ ಸದಾಶಿವ ನಗರ ಪ್ರಥಮ, ವಿಷ್ಣು ಬಳಗ ಅಡ್ಕ ದ್ವಿತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಭವ್ಯ ತಂಡ ಪ್ರಥಮ, ನಿಖಿತ ತಂಡ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿತು. ಮೊಸರು ಕುಡಿಕೆ ಕಂಬ ಏರುವುದರಲ್ಲಿ ಸದಾಶಿವ ಪಡ್ಪುರವರು ಪ್ರಶಸ್ತಿ ಪಡೆದುಕೊಂಡರು. ಉಳಿದಂತೆ ವಾಲಿಬಾಲ್, ಮಡಿಕೆ ಒಡೆಯುವುದು, ಗೋಣಿ ಚೀಲದ ಓಟ, ಕೋಲು ಓಟ, ಲಕ್ಕಿ ಸರ್ಕಲ್, ಗುಂಡೆಸೆತ, ರಾಧಾಕೃಷ್ಣ ಛದ್ಮವೇಷ, ಕಡ್ಲೆ ಹೆಕ್ಕುವುದು, ಲಿಂಬೆ ಚಮಚ ಓಟ ಇತ್ಯಾದಿ ಆಟಗಳು ನಡೆಯಿತು.
ಮನರಂಜಿಸಿದ ಪುಟಾಣಿಗಳ ಕೃಷ್ಣವೇಶ ಸ್ಪರ್ಧೆ
ಶ್ರೀಕೃಷ್ಣ ಜನ್ಮಾಷ್ಠಮಿಯ ವಿಶೇಷತೆಯಾಗಿ ಕೊಲತ್ತಡ್ಕ, ಕುಂಬ್ರ ಮತ್ತು ಪರ್ಪುಂಜ ಅಂಗನವಾಡಿ ಪುಟಾಣಿಗಳಿಗೆ ಕೃಷ್ಣವೇಷ ಸ್ಪರ್ಧೆ ನಡೆಯಿತು.50 ಕ್ಕೂ ಅಧಿಕ ಪುಟಾಣಿಗಳು ಕೃಷ್ಣ ವೇಶ ತೊಟ್ಟು ನಲಿದಾಡಿದರು. ಇದರಲ್ಲಿ ಪ್ರಥಮ, ದ್ವಿತೀಯ ಹಾಗೇ ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೂ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.