ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಮಹಾಸಭೆಯಲ್ಲಿ ಶೀನ ನಾಯ್ಕ ಹೇಳಿಕೆ
ವ್ಯವಹಾರ ರೂ.23.38 ಕೋಟಿ | ಲಾಭ ರೂ.23.30 ಲಕ್ಷ | ಡಿವಿಡೆಂಟ್ 9% ಘೋಷಣೆ
ಪುತ್ತೂರು: ವಿಟ್ಟದಲ್ಲಿ ಸಹಕಾರಿಯ ಶಾಖೆ ಆರಂಭಿಸಬೇಕಾದರೇ, ಎಲ್ಲರೂ ಸೇರಿಕೊಂಡು ಸದಸ್ಯರ ತಂಡ, ಪಾಲು ಬಂಡವಾಳದ ಕ್ರೋಢಿಕರಣ ಮೂಲಕ ಶಾಖೆ ತೆರೆಯಲು ಸಂಪೂರ್ಣ ಸಹಕಾರವಿರುತ್ತದೆ.

ನಮ್ಮ ಸಹಕಾರಿಯಲ್ಲಿ ಅನುಭವಿ ನಿರ್ದೇಶಕರುಗಳಲ್ಲಿ ಹೆಚ್ಚಿನವರು ಬೇರೆ -ಬೇರೆ ಸಂಘಟನೆಯಲ್ಲಿ ತೊಡಗಿಕೊಂಡಿರುವವರು. ಸಹಕಾರಿಯೊಂದು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕಾದರೆ , ಆರ್ಹ ಸದಸ್ಯರ ಸಂಖ್ಯೆ ಹೆಚ್ಚಿರಬೇಕು ಆಗಲೇ ಸಹಕಾರಿಯನ್ನು ಪ್ರಶ್ನಿಸಲು ಸಾಧ್ಯವಿದೆಯೆಂದು ತಾ.ಪಂ. ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ಶೀನ ನಾಯ್ಕ ಹೇಳಿದರು.
ಆ.17ರಂದು ಕೊಂಬೆಟ್ಟು ಮರಾಟಿ ಸಮಾಜದ ಸಭಾಂಗಣದಲ್ಲಿ ನಡೆದ ಸಹಕಾರಿಯ 2024-25 ಸಾಲಿನ 6 ನೇಯ ಮಹಾಸಭೆಯಲ್ಲಿ ಮಾತನಾಡಿದ ಅವರು , ಪ್ರಸಕ್ತ ಸಾಲಿನಲ್ಲಿ ಸಹಕಾರಿಯು ರೂ.23.38 ಕೋಟಿ ರೂ ವ್ಯವಹಾರ ನಡೆಸಿದ್ದು, ರೂ. 23.30 ಲಕ್ಷ ಲಾಭ ಗಳಿಸಿದ್ದು , ಎಲ್ಲಾ ಸದಸ್ಯರಿಗೂ ಶೇಕಡಾ 9ರಷ್ಟು ಡಿವಿಡೆಂಡ್ ನೀಡುವುದಾಗಿ ತಿಳಿಸಿದರು.
ಸಹಕಾರಿಯ ಒಟ್ಟು ಸದಸ್ಯರ ಸಂಖ್ಯೆ 2176 ಇದ್ದು , ರೂ. 46.25 ಲಕ್ಷ ಶೇರು ಬಂಡವಾಳ ಹೊಂದಿದೆ.
ರೂ.3.65 ಕೋಟಿ ಸಾಲ ನೀಡಲಾಗಿದ್ದು , ನೂರರಷ್ಟು ವಸೂಲಾತಿ ಆಗಿದೆ. ರೂ.6.06 ಕೋಟಿ ಠೇವಣಿ ಸಂಗ್ರಹಣೆಯೂ ಆಗಿದೆಯೆಂದು ಮಾಹಿತಿ ನೀಡಿದರು.
ಮಹಮ್ಮಾಯಿ ಮಕ್ಕಳ ಭವಿಷ್ಯ ನಿಧಿ ನಿರಖು ಠೇವಣಿ ಯೋಜನೆ ಮೂಲಕ 1 ಲಕ್ಷ ರೂಪಾಯಿ ಠೇವಣಿಗೆ 8 ವರ್ಷದ ಅವಧಿಗೆ ಇಮ್ಮಡಿ ಮೊತ್ತದ ಯೋಜನೆ, ಜೊತೆಗೆ ಚಿನ್ನಾಭರಣ ಸಾಲ ಸಹಿತ ವೇತನ ಸಾಲ, ಅಡಮಾನ ಸಾಲವೆಲ್ಲಾ ಕಡಿಮೆ ಬಡ್ಡಿ ದರದಲ್ಲಿ ಲಭ್ಯವಿದೆ ಯೆಂದು ಮಾಹಿತಿ ನೀಡಿದ ಅವರು , ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದ ನಿರ್ಮಾಣಕ್ಕೆ ಮೀಸಲು ನಿಧಿಯಿಂದ ಶೇಕಡಾ ಇಪ್ಪತ್ತರಷ್ಟೂ ಹಣ ಇಡುತ್ತೇವೆ ಎಂದಾಗ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಅನುಮೋದಿಸಿದರು.
ಸಂಘದ ಅಭಿವೃದ್ಧಿ, ಒಳಿತಿಗಾಗಿ ಅರ್ಹ ಸದಸ್ಯರಾಗಿ ವ್ಯವಹರಿಸಿರಿ ಹಾಗೂ ನಮ್ಮೊಂದಿಗೆ ಕೈ ಜೋಡಿಸಿರಿ ಮತ್ತು ನೈತಿಕ ಬಂಬಲ ನೀಡಿಯೆಂದು ಹೇಳಿ ಸದಸ್ಯರ ಮತ್ತು ಸಮಾಜ ಭಾಂದವರ ಬೆಂಬಲ ಯಾಚಿಸಿದರು.
ಸಹಕಾರಿಯ ಗೌರವ ಸಲಹೆಗಾರ ಮಂಜುನಾಥ್ ಎನ್.ಎಸ್ ಮಾತನಾಡಿ , ಉತ್ತಮ ಸಹಕಾರಿಯೊಂದು ಹೇಗಿರಬೇಕೇಂದು ಯಾರೊಬ್ಬರು ಪ್ರಶ್ನೆ ಮಾಡಿದರೇ , ಮಹಮ್ಮಾಯಿ ಸಹಕಾರಿಯನ್ನು ಧೃತಿಗೆಡದೆ ತೋರಿಸಬಹುದು. ಪರಿಪಕ್ವವಾದ ಲೆಕ್ಕ ಪತ್ರ ಮಂಡನೆ ನೀಡಿರುವ ಆಡಳಿತ ಮಂಡಳಿಯಲ್ಲಿನ 9 ಮಂದಿ ಬ್ಯಾಕಿಂಗ್ ಉದ್ಯೋಗದಿಂದಲೇ ಬಂದವರಾದರಿಂದ , ನಮಗಿಂತಲೂ ಹೆಚ್ಚು ಅವರು ಅನುಭವಿಗಳು ಎಂದು ಹೇಳಿದ ಅವರು ಸ್ವಂತ ಸಂಕೀರ್ಣದಲ್ಲಿ ಸಹಕಾರಿಯ ದಶಮಾನೋತ್ಸವ ನಡೆಯಲಿಯೆಂದು ಹಾರೈಸಿದರು.
ಇನ್ನೋರ್ವ ಸದಸ್ಯ , ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸು ನಾಯ್ಕ ಕೂಡ ಹಾರೈಸಿದರು.
ಉಪಾಧ್ಯಕ್ಷ ಚೋಮ ನಾಯ್ಕ ಉದ್ದೇಶಿತ ಕಾರ್ಯಯೋಜನೆಯ ಮಾಹಿತಿ ನೀಡಿದರು. ನಿರ್ದೇಶಕರುಗಳಾದ ಶಿವಪ್ಪ ನಾಯ್ಕ ಮತ್ತು ವೆಂಕಪ್ಪ ನಾಯ್ಕ ವಿವಿಧ ವಿಷಯಗಳನ್ನು ವಿವರಿಸಿದರು.
ಈ ವೇಳೆ ಸಹಕಾರಿಯ ಎಲ್ಲಾ ನಿರ್ದೇಶಕರು, ಸದಸ್ಯರು ಮತ್ತು ಸಮಾಜ ಭಾಂದವರು ಹಾಗೂ ಸದಸ್ಯರಾದ ನಿವೃತ್ತ ಡಿ.ಜಿ.ಎಂ ವಾಸು ನಾಯ್ಕ ಗಣೇಶ್ ಭಾಗ್ ಸಂಘದ ಕಾರ್ಯವೈಖರಿ, ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸುರೇಶ್ ಬೆಳ್ತಂಗಡಿ ಸೂಕ್ತ ಸಲಹೆ , ಸಲಹೆಯನ್ನಿತ್ತರು. ಸಿಬಂದಿ ಮಮತಾ ಹೆಚ್ ಪ್ರಾರ್ಥಿಸಿದರು, ಕಾರ್ಯನಿರ್ವಹಣಾಧಿಕಾರಿ ನಂದಿತ್ ಬಿ. ನಾಯ್ಕ ವರದಿ ಮಂಡಿಸಿದರು. ನಿರ್ದೇಶಕ ಕರುಣಾಕರ ನಾಯ್ಕ ವಂದಿಸಿ , ಸಿಬ್ಬಂದಿ ಜಯ ಹಾಗೂ ಪಿಗ್ಮಿ ಎಜೆಂಟ್ ಗಣೇಶ್ ಸಹಕರಿಸಿದರು.ಆ ಬಳಿಕ ಸಿಹಿ ಭೋಜನ ನೆರವೇರಿತು.
ಸನ್ಮಾನ…..
ಕಳೆದ ಹತ್ತು ವರುಷಗಳಿಂದ ರಾಜ್ಯದೆಲ್ಲೆಡೆಗೆ ಹಾಳೆತಟ್ಟೆಯನ್ನು ಉತ್ತಮ ದರದಲ್ಲಿ ಒದಗಿಸುತ್ತಿರುವ ಯುವ ಉದ್ಯಮಿ, ದಿ.ನಾರಾಯಣ ನಾಯ್ಕ ಮೇಗಿನಪಂಜ ಇವರ ಪುತ್ರ, ಅಮ್ಮ ಹಾಳೆತಟ್ಟೆ ಘಟಕದ ಮಾಲೀಕ ತಾರನಾಥ ಇವರನ್ನು ಸಹಕಾರಿ ಪರವಾಗಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.