ಕಾಣಿಯೂರು: ಪುಣ್ಚತ್ತಾರು ಶ್ರೀಹರಿ ರಿಕ್ಷಾ ತಂಗುದಾಣಕ್ಕೆ ಇಂಟರ್ ಲಾಕ್ ಅಳವಡಿಸುವ ಕಾಮಗಾರಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರು, ಶ್ರೀ ಹರಿ ರಿಕ್ಷಾ ಚಾಲಕ ಮಾಲಕ ಸಂಘದ ಗೌರವ ಅಧ್ಯಕ್ಷ ಗಣೇಶ ಉದನಡ್ಕ, ಚಾರ್ವಾಕ ಪ್ರಾ. ಕೃ.ಪ. ಸ. ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ದಿವಾಕರ ಮರಕ್ಕಡ, ಅನಂತಕುಮಾರ್ ಬೈಲಂಗಡಿ, ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ಮತ್ತು ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶ್ರೀಹರಿ ರಿಕ್ಷಾ ಚಾಲಕ ಮಾಲಕ ಸಂಘದ ಮೋಹನ್ ದಾಸ್ ರೈ ಪಿಜಕಳ ಸ್ವಾಗತಿಸಿ, ಶಿವರಾಮ ರೈ ಪಿಜಕಳ ವಂದಿಸಿದರು.