ಕಾಣಿಯೂರು: ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾದುದು. ದೇಶದ ಭವಿಷ್ಯವಾಗಿರುವ ಯುವ ಸಮುದಾಯ ಸನ್ಮಾರ್ಗದಲ್ಲಿ ಮುನ್ನಡೆದು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಬಾಲಕೃಷ್ಣ ಕೆ ಅವರು ಹೇಳಿದರು.

ಅವರು ಆ.17ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 13ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ ಮಾತನಾಡಿ, ಯುವಕ ಮಂಡಲವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದು, ಎಲ್ಲರ ಸಹಕಾರದಿಂದ ಯುವಕ ಮಂಡಲದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದೆ. ಮುಂದೆಯೂ ಎಲ್ಲರ ಸಹಕಾರ ಅಗತ್ಯ ಎಂದರು. ಕಾಣಿಯೂರು ಶ್ರೀ ಲಕ್ಷ್ಮಿನರಸಿಂಹ ಭಜನಾ ಮಂಡಳಿ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ, ಅರ್ಚಕ ಪ್ರಶಾಂತ್ ಭಟ್ ಪರ್ಲತ್ತಾಯ ಕಟ್ಟತ್ತಾರು, ಕಾಣಿಯೂರು ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿಯ ಅಧ್ಯಕ್ಷೆ ಪೂರ್ಣಿಮಾ.ಸಿ ಕಲ್ಪಡ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ರಾಧಾಕೃಷ್ಣ ಪೆರ್ಲೋಡಿ, ಪುಷ್ಪಾ ರಾಜೇಶ್ ಪುತ್ತೂರು ಉಪಸ್ಥಿತರಿದ್ದರು. ಯುವಕ ಮಂಡಲದ ಸದಸ್ಯರಾದ ಲಕ್ಷ್ಮಣ ಗೌಡ ಮುಗರಂಜ, ಕೀರ್ತಿಕುಮಾರ್ ಏಳುವೆ, ಜಯಂತ್ ಅಬೀರ, ಜಗದೀಶ್ ಪೆರ್ಲೋಡಿ, ಧರ್ಮಪಾಲ ಕಲ್ಪಡ, ರಚನ್ ಬರಮೇಲು, ಪುನೀತ್ ಕಲ್ಪಡ ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.
ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಓಡಬಾಯಿ ಸನ್ಮಾನಿತರ ಪರಿಚಯ ವಾಚಿಸಿ, ಯುವಕ ಮಂಡಲದ ಕಾರ್ಯದರ್ಶಿ ದೀಕ್ಷಿತ್ ಕಂಪ ಬಹುಮಾನ ವಿಜೇತರ ವಿವರ ವಾಚಿಸಿದರು. ಯುವಕ ಮಂಡಲದ ವಿನಯ್ ಏಳುವೆ ಸ್ವಾಗತಿಸಿ, ಗೌರವಾಧ್ಯಕ್ಷ ಸುರೇಶ್ ಓಡಬಾಯಿ ವಂದಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ, ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸನ್ಮಾನ
ಕಾರ್ಯಕ್ರಮದಲ್ಲಿ ನಿವೃತ್ತ ಕಾಣಿಯೂರು ಗ್ರಾಮ ಸಹಾಯಕ ವಾಸುದೇವ ನಾಯ್ಕ್ ತೋಟ, ಕಾಣಿಯೂರು ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ರೋಹಿಣಿ ಸುವರ್ಣ ಅಬೀರ, ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 ಅಂಕ ಪಡೆದು ರಾಜ್ಯಕ್ಕೆ 5ನೇ ಸ್ಥಾನ ಪಡೆದ ಶ್ರೀವಿದ್ಯಾ ಎನ್, ಪಿಯುಸಿ ಪರೀಕ್ಷೆಯಲ್ಲಿ 593 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಪಡೆದ ಉತ್ತಮ್ ಗುಂಡಿಗದ್ದೆ, ಕಳೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಹನ್ಸಿಕಾ, ಪಿಯುಸಿ ಪರೀಕ್ಷೆಯಲ್ಲಿ 593 ಅಂಕ ಪಡೆದು ರಾಜ್ಯಕ್ಕೆ 7ನೇ ಸ್ಥಾನ ಪಡೆದ ವಿಕಾಸ್ ಬೊಬ್ಬೆಕೇರಿ, ಎಂ.ಬಿ.ಬಿ.ಎಸ್ ಪದವೀಧರ ಡಾ. ಅನುಷ್ ಮುಗರಂಜ ಅವರನ್ನು ಸನ್ಮಾನಿಸಲಾಯಿತು.
ಉದ್ಘಾಟನೆ
ಬೆಳಿಗ್ಗೆ ಕಾರ್ಯಕ್ರಮವನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಹಿರಿಯ ಸದಸ್ಯ ಚಂದಪ್ಪ ಗೌಡ ಹೊಸೋಕ್ಲು ಅವರು ಉದ್ಘಾಟಿಸಿದರು. ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಗಣೇಶೋತ್ಸವದ ಆಮಂತ್ರಣ ಅನಾವರಣ
ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಆಶ್ರಯದಲ್ಲಿ ಆ.27,28ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಲಿರುವ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣವನ್ನು ಅನಾವರಣಗೊಳಿಸಿಲಾಯಿತು.