ಪುತ್ತೂರು: ಬೊಳುವಾರು ಕರ್ಮಲ ದಿ.ನೇಮಣ್ಣ ಗೌಡ ಅವರ ಪತ್ನಿ ಗಿರಿಜಾ ಅವರ ಶ್ರದ್ದಾಂಜಲಿ ಕಾರ್ಯಕ್ರಮ ಆ.17ರಂದು ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ನಡೆದ ವೈಕುಂಠ ಸಮಾರಾಧಾನೆಯಲ್ಲಿ ನಡೆಯಿತು.
ಗಿರಿಜಾ ಅವರ ಸಂಬಂಧಿಕರಾಗಿರುವ ಪುರುಷೋತ್ತಮ ಗೌಡ ಕಾರ್ಕಳ ಅವರು ನುಡಿನಮನ ಸಲ್ಲಿಸಿದರು.
ಈ ಸಂದರ್ಭ ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಕುಟುಂಬಸ್ಥರಾದ ವಿಲಾಸಿನಿ ಸುಂದರ ಗೌಡ, ಸುರೇಶ್ ಉಷಾಕಿರಣ್ ಮಂಗಳೂರು, ಪ್ರತಿಮಾ ಸತೀಶ್ ಸಂಪ್ಯ ಮೇರ್ಲ, ರಾಜೇಶ್ ಕುಮಾರ್, ಮಮತಾ ಬೆಂಗಳೂರು, ಯಶೋಧಾ ವಿಶ್ವನಾಥ ಗೌಡ ವೀರಮಂಗಲ, ವಿನೋದ ಭೋಜರಾಜ ಗೌಡ ಬಲ್ನಾಡು, ಸರೋಜ ಚಂದಪ್ಪ ಗೌಡ ಬೆಂಗಳೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಂಧುಗಳು ಮತ್ತು ಹಿತೈಷಿಗಳು ಗಿರಿಜಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು.