ವಿಟ್ಲ: ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರ ವೃಂದದ ವತಿಯಿಂದ ಶ್ರೀ ಕೃಷ್ಣಾಷ್ಟಮಿ ಆಚರಣೆ ಹಾಗೂ ಕೆಸರ್ಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಡಾ.ರವಿಕಿರಣ ಪಡಿಬಾಗಿಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸತೀಶ್ ಆಳ್ವ ಇರಾ ಬಾಳಿಕೆ, ಸಂಜೀವ ಪೂಜಾರಿ ಭಾರತ್ ಸಂಸ್ಥೆಗಳು ವಿಟ್ಲ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೃಷ್ಣಯ್ಯ ಕೆ ವಿಟ್ಲ ಅರಮನೆ, ಅಳಿಕೆ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್,ಅಳಿಕೆ ಪಂಚಾಯತ್ ಸದಸ್ಯ ಸಧಾಶಿವ ಶೆಟ್ಟಿ, ಆನಂದ ಶೆಟ್ಟಿ ತಾಳಿಪಡ್ಪು, ರಾಜೀವ ಭಂಡಾರಿ ಕುದ್ದುಪದವು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ರಂಜಿತ್ ಶೆಟ್ಟಿ ಗುಭ್ಯ, ಶರತ್ ಮಡಿಯಾಲ, ರಾಜಶೇಖರ ಶೆಟ್ಟಿ ತಾಳಿಪಡ್ಪು, ವಿಟಿವಿ ಆಡಳಿತ ನಿರ್ದೇಶಕರಾದ ರಾಮ್ ದಾಸ್ ಶೆಟ್ಟಿ ವಿಟ್ಲ, ಸುಜ್ಞಾನ ಮಹಿಳಾ ಮಂಡಳಿ ಅಧ್ಯಕ್ಷೆ ಶಾಲಿನಿ ಸದಾನಂದ ಶೆಟ್ಟಿ, ಮಿತ್ರ ವೃಂದದ ಹಿರಿಯ ಸಲಹೆ ಗಾರ ರಮೇಶ್ ಬಂಗೇರ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಮೊಹನದಾಸ ರೈ ಎರುಂಬು ಸ್ವಾಗತಿಸಿದರು. ದೈಹಿಕ ಶಿಕ್ಷಕಿ ನೀರಜ ಎರುಂಬು, ದೈಹಿಕ ಶಿಕ್ಷಕ ಸುರೇಶ್ ವೈ.ಯಸ್, ಕೆ ವಿ. ಬಂಗೇರ ಕಲ್ಲದಂಬೆ ತೀರ್ಪುಗಾರರಾಗಿ ಸಹಕರಿಸಿದರು.
ಕಾರ್ಯಕ್ರಮಕ್ಕೆ ಸ್ಥಳ ದಾನ ಮಾಡಿದ ಶ್ರೀ ಭಗವತಿ ತಿಯಾ ಸಮಾಜ ಎರುಂಬು, ರಾಘವೇಂದ್ರ , ಜಯಂತಿ ಮೂಡಾಯಿಬೆಟ್ಟು, ರಾಮ ನಾಯ್ಕ ಮಾಡಾಯಿಬೆಟ್ಟು, ಮಿತ್ರ ವೃಂದದ ಸದಸ್ಯ, ಭಾರತೀಯ ಸೇನಾ ಯೋಧ ಸಾಗರ್ ಎರುಂಬುರವರನ್ನು ಗೌರವಿಸಲಾಯಿತು. ಶ್ರೀ ವಿಷ್ಣುಮಂಗಲ ಕುಣಿತ ಭಜನಾ ತಂಡ ಎರುಂಬು, ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ತಂಡ ಕುಂಡಡ್ಕ, ಶ್ರೀ ಶಾಸ್ತ ಕುಣಿತ ಭಜನಾ ತಂಡ ಮುಳಿಯ, ಶ್ರೀ ಕಾರ್ತಿಕೆಯ ಕುಣಿತ ಭಜನಾ ತಂಡ ನೆಕ್ಕಿತ್ತಪುಣಿ ಅಳಿಕೆ, ಶ್ರೀ ಸ್ಕಂದ ಕುಣಿತ ಭಜನಾ ತಂಡ ಚೆಂಡುಕಳ ಅಳಿಕೆ, ಕುಣಿತ ಭಜನಾ ಮೆರವಣಿಗೆಯಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಿತ್ರ ವೃಂದದ ಅಧ್ಯಕ್ಷ ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.