ಪುತ್ತೂರು: ಇಲ್ಲಿನ ಜಿ.ಎಲ್.ವನ್ ಮಾಲ್ನ ಮಂಗಲ್ ಹೈಪರ್ ಮಾರ್ಕೆಟ್ನಲ್ಲಿ ಮಂಗಲ್ಸ್ ಸ್ಟೋರ್ಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಲಾಪರ್ಬ ಚಿತ್ರಕಲಾ ಸ್ಪರ್ಧೆಯನ್ನು ಆ.17ರಂದು ನಡೆಸಲಾಯಿತು. 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಒಟ್ಟು 456 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆನಂದ್ ಎಸ್ ಕೆ ಮಾಸ್ಟರ್ ಪ್ಲಾನೆರಿ, ಪ್ರಭಾಕರ್ ಎಂಎನ್, ಸುವರ್ಣ ಭಟ್, ರೇಖ ಆನಂದ್, ತಿಮ್ಮಪ್ಪಯ್ಯ, ಸುದರ್ಶನ್ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕೆ.ಜಯಲಕ್ಷ್ಮೀ ಆಚಾರ್ಯ, ಪುತ್ತೂರಿನ ಚಿತ್ರಕಲಾ ಶಿಕ್ಷಕ ಕೆ.ದಿನೇಶ್ ವಿಶ್ವಕರ್ಮ, ಚಿತ್ರ ಕಲಾವಿದ ಶಿವಗಿರಿ ಕಲ್ಲಡ್ಕ, ಸುಧಾಕರ್ ಪಡೀಲ್ ತೀರ್ಪುಗಾರರಾಗಿ ಆಗಮಿಸಿದ್ದರು.

ಬಹುಮಾನ ವಿಜೇತರು: 1ನೇ ತರಗತಿ ವಿಭಾಗದಲ್ಲಿ ಮೊಹಮ್ಮದ್ ಶಫೀಕ್ ಪ್ರಥಮ ಬಹುಮಾನ ಪಡೆದರೆ ಸೈಂಟ್ ವಿಕ್ಟರ್ಸ್ ಶಾಲೆಯ ಹಯ ಫಾತಿಮಾ ದ್ವಿತೀಯ ಬಹುಮಾನ ಹಾಗೂ ಅಂಬಿಕ ವಿದ್ಯಾಲಯದ ನಿಶಾನಿ ತೃತೀಯ ಬಹುಮಾನ ಪಡೆದಿದ್ದಾರೆ.
೨ನೇ ತರಗತಿ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅಂಬಿಕ ವಿದ್ಯಾಲಯದ ಕನಿಷ್ಕ, ದ್ವಿತೀಯ ಬಹುಮಾನವನ್ನು ವಿವೇಕಾನಂದ ಶಾಲೆಯ ಅಮೂಲ್ಯ ಎಆರ್, ತೃತೀಯ ಬಹುಮಾನವನ್ನು ಹೊರಿಜೋನ್ ಶಾಲೆಯ ಅಫ್ರಾಜ್ ಪಡೆದರು.
3ನೇ ತರಗತಿ ವಿಭಾಗದಲ್ಲಿ ಅಂಬಿಕ ವಿದ್ಯಾಲಯದ ಶಿವಾನಿ ಎನ್ ರೈ, ಸೈಂಟ್ ವಿಕ್ಟರ್ ಶಾಲೆಯ ತನ್ಶ್, ಸಾಥ್ವಿ ಭಟ್ ತೃತೀಯ ಬಹುಮಾನ ಪಡೆದರು.
4ರಿಂದ 7ನೇ ತರಗತಿ ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ ಬಿಂದು ಪ್ರಥಮ ಬಹುಮಾನ ಪಡೆದರೆ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಬಿಎಸ್ ದ್ವಿತೀಯ ಬಹುಮಾನ ಹಾಗೂ ಅಂಬಿಕ ವಿದ್ಯಾಲಯದ ಧನ್ವಿ ಜಿ ಹೆಗ್ಡೆ ತೃತೀಯ ಬಹುಮಾನ ಪಡೆದರು.
ಅರ್ಜುನ್ ಎಸ್ಕೆ, ಅಕ್ಷಯ್ ಎಸ್ಕೆ, ಬಲರಾಮ್ ಆಚಾರ್ಯ, ಹರ್ರಿ ಡಿ’ಸೋಜಾ, ಅಜೀಜ್ ಕುರ್ನಡ್ಕ, ಶ್ರೀಶೈಲ್ ನರಗುಂದ ಅವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವತಿರಿಸಿದರು.
ಸು ಫ್ರಂ ಸೋ ಸಿನಿ ತಂಡ ಭೇಟಿ: ಬಿಡುಗಡೆಯ ನಂತರ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ವೀಕ್ಷಣೆಗಳನ್ನು ಕಾಣುತ್ತಿರುವ ಸೂ ಫ್ರಂ ಸೋ ಸಿನಿಮಾ ತಂಡವು ಚಿತ್ರಕಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿತು.