ಪುತ್ತೂರು: ಬನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಅಧ್ಯಕ್ಷರಾಗಿ ನಿವೃತ್ತ ಎ.ಎಸ್.ಐ ಪಾಂಡುರಂಗ ಗೌಡ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುಹಾಸ್ ರೈ ಯವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಮಹಾಬಲ ಪೂಜಾರಿ, ನಳಿನಾಕ್ಷಿ, ಖಜಾಂಚಿಯಾಗಿ ಶಾಲಾ ಮುಖ್ಯ ಗುರು ಮಹಮ್ಮದ್ ಅಶ್ರಫ್, ಜತೆ ಕಾರ್ಯದರ್ಶಿಯಾಗಿ ಶಾರದಾ ಅರಸ್, ಗೌರವ ಸಲಹೆಗಾರರಾಗಿ ನಿವೃತ್ತ ಯೋಧ ವಸಂತ ಗೌಡ ದೇವಸ್ಯ, ಇಫಾಝ್ ಬನ್ನೂರು, ನಿವೃತ್ತ ಮುಖ್ಯ ಗುರು ಮುದರ ಹಾಗೂ 15 ಮಂದಿಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
1927 ಜನವರಿಯಲ್ಲಿ ಪ್ರಾರಂಭ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಸಂಸ್ಥೆಯಾಗಿದೆ. 2025ರ ಡಿಸೆಂಬರ್ ನಲ್ಲಿ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ದೊರೆತು ಒಂದು ವರ್ಷಗಳ ಕಾಲ ನಿರಂತರವಾಗಿ 100 ಕಾರ್ಯಕ್ರಮ ನಡೆಸಿ 2026 ಡಿಸೆಂಬರ್ ನಲ್ಲಿ ಶತಮಾನೋತ್ಸವದ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.