ರಾಜಕೀಯದಲ್ಲಿ ನಾನು ಸಂತೃಪ್ತ – ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್ರವರಿಗೆ ಉನ್ನತ ಸ್ಥಾನ- ಕಾವು ಹೇಮನಾಥ ಶೆಟ್ಟಿ
ಪುತ್ತೂರು: ರಾಜಕೀಯದಲ್ಲಿ ನಾನು ಸಂತೃಪ್ತಿಯನ್ನು ಹೊಂದಿದ್ದೇನೆ, ಮೂರು ಬಾರಿ ನಾನು ಸಂಸದನಾಗಿದ್ದೆ, ಈ ಅವಧೀಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸವನ್ನು ಮಾಡಿದ್ದೇನೆ ಎಂಬ ಅತ್ಮಸಂತೃಪ್ತಿ ಇದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಆ.17ರಂದು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಕೈಕಾರದಲ್ಲಿ ಜರಗಿದ “ಬಂಂಟೆರೆ ಕೆಸರ್ಡ್ ಒಂಜಿ ಕುಸಲ್” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ ರಾಜಕೀಯ ರಹಿತವಾಗಿ ಪುತ್ತೂರು ತಾಲೂಕು ಬಂಟರ ಸಂಘವನ್ನು ಕಟ್ಟುತ್ತಿರುವ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಕಾರ್ಯವೈಖರಿ ನಿಜಕ್ಕೂ ತುಂಬಾ ಸಂತೋಷ ತಂದಿದೆ. ನಾನು ಪುತ್ತೂರು ತಾಲೂಕು ಬಂಟರ ಸಂಘದ ಎಲ್ಲಾ ಕಾರ್ಯಕ್ರಮಕ್ಕೂ ನನ್ನ ಬೆಂಬಲ ನೀಡುತ್ತೇನೆ. ತಾಲೂಕು ಬಂಟರ ಸಂಘಕ್ಕೆ ಸರಕಾರದಿಂದ ಜಾಗ ಮಂಜೂರಾಗಿರುವುದು ತುಂಬಾ ಖುಷಿ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ತಾಲೂಕು ಬಂಟರ ಸಂಘದ ವತಿಯಿಂದ ನಳಿನ್ ಕುಮಾರ್ ಕಟೀಲ್ರವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ನಳಿನ್ ಕುಮಾರ್ ಕಟೀಲ್ರವರಿಗೆ ಉನ್ನತ ಸ್ಥಾನ- ಕಾವು ಹೇಮನಾಥ ಶೆಟ್ಟಿ
ಅಧ್ಯಕ್ಷತೆ ವಹಿಸಿದ ತಾಲೂಕು ಬಂಟರ ಶಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ನಳಿನ್ ಕುಮಾರ್ ಕಟೀಲ್ರವರು ರಾಜಕೀಯದಲ್ಲಿ ಭಾರೀ ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದು ಬಂಟ ಸಮಾಜಕ್ಕೆ ಖುಷಿಯ ವಿಚಾರ, ಒಂದೊಮ್ಮೆ ಈ ರಾಜ್ಯದ ಮುಖ್ಯ ಮಂತ್ರಿಯಾಗಿ ನಳೀನ್ ಕುಮಾರ್ ಕಟೀಲ್ರವರು ಆಯ್ಕೆ ಆಗುತ್ತಾರೆ ಎಂಬ ಸುದ್ದಿ ಇತ್ತು. ಮುಂದೆ ಇವರಿಗೆ ಮುಂದೆ ಉತ್ತಮ ಅವಕಾಶ ಒದಗಿ ಬರಲಿ ಎಂದು ಶುಭಹಾರೈಸಿದರು.
ಸಂಘದ ಅಭಿವೃದ್ಧಿಗೆ ಸದಾ ಸಹಕಾರ ಇದೆ- ಅಗರಿ ನವೀನ್ ಭಂಡಾರಿ
ಆರ್ಬಿಐ ಮಾಜಿ ನಿರ್ದೇಶಕ ಸಹಕಾರರತ್ನ ಅಗರಿ ನವೀನ್ ಭಂಡಾರಿಯವರು ಮಾತನಾಡಿ, ಕಾವು ಹೇಮನಾಥ ಶೆಟ್ಟಿಯವರು ಬಂಟರ ಸಂಘದ ಅಧ್ಯಕ್ಷರಾಗಿ ಸಂಘಟನೆಯನ್ನು ಉತ್ತಮ ರೀತಿಯಲ್ಲಿ ಬಲಪಡಿಸುತ್ತಿದ್ದಾರೆ. ಸಂಘದ ಅಭಿವೃದ್ಧಿಗೆ ಸದಾ ಸಹಕಾರ ಇದೆ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ತಾಲೂಕು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಜಿ ಅಧ್ಯಕ್ಷರುಗಳಾದ ಬೂಡಿಯಾರ್ ರಾಧಾಕೃಷ್ಣ ರೈ, ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ, ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಉದ್ಯಮಿಗಳಾದ ಶಿವಪ್ರಸಾದ್ ಶೆಟ್ಟಿ ಕಿನಾರ, ಸೀತಾರಾಮ ರೈ ಕೆದಂಬಾಡಿಗುತ್ತು, ಪ್ರಸನ್ನ ಶೆಟ್ಟಿ ಸಿಜ್ಲ್ಲರ್, ತಾಲೂಕು ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ, ತಾಲೂಕು ಬಂಟರ ಸಂಘದ ನಿರ್ದೇಶಕ ಶಶಿರಾಜ್ ರೈ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ನಿರ್ದೇಶಕರುಗಳಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಶಶಿಕಿರಣ್ ರೈ ನೂಜಿಬೈಲು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಬಂಟರ ಸಂಘದ ಕಚೇರಿ ವ್ಯವಸ್ಥಾಪಕಿ ರಂಜಿನಿ ಶೆಟ್ಟಿ, “ಬಂಟೆರೆ ಕೆಸರ್ಡ್ ಒಂಜಿ ಕುಸಲ್” ಕಾರ್ಯಕ್ರಮದ ಸಂಚಾಲಕ ದಯಾನಂದ ರೈ ಕೋರ್ಮಂಡ, ಅಧ್ಯಕ್ಷ ಸೀತಾರಾಮ ಶೆಟ್ಟಿ ಕೈಕಾರ, ಕಾರ್ಯದರ್ಶಿ ಪ್ರಜ್ವಲ್ ರೈ ತೊಟ್ಲ, ಗಿರೀಶ್ ರೈ ಮೂಲೆ ಸಹಿತ ಅನೇಕ ಮಂದಿ ಸಹಕರಿಸಿದರು. ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.