ಪುತ್ತೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಹಾಗೂ ಗ್ರಾಮ ಪಂಚಾಯತು ಕೊಡಿಪ್ಪಾಡಿ ಇವರ ಸಹಯೋಗದೊಂದಿಗೆ ಕೊಡಿಪ್ಪಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಹುಚ್ಚುನಾಯಿ ರೋಗದ ವಿರುದ್ದ ಉಚಿತ ಲಸಿಕೆ ಕಾರ್ಯಕ್ರಮ ಮಾಡಲಾಯಿತು. ಜಾನುವಾರು ಅಭಿವೃದ್ದಿ ಅಧಿಕಾರಿ ಪುಷ್ಪರಾಜ ಶೆಟ್ಚಿ ಹುಚ್ಚುನಾಯಿ ರೋಗದ ಬಗ್ಗೆ ರೈತರಿಗೆ ಮಾಹಿತಿ ನೀಡಿ ಹುಚ್ಚುನಾಯಿ ರೋಗದ ವಿರುದ್ದ ಉಚಿತ ಲಸಿಕಾ ಅಭಿಯಾನದಲ್ಲಿ ಎಲ್ಲಾ ರೈತರು ತಮ್ಮ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಲಸಿಕೆ ಹಾಕಿಸಿ ಸಹಕರಿಸಬೇಕೆಂದು ಮನವಿ ಮಾಡಿದರು. ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಅದ್ಯಕ್ಷ ಸೊಮಪ್ಪ ಪೂಜಾರಿ ಓಜಾಲ, ಪಿಡಿಓ ಶರೀಪ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಶುಸಖಿ ಶೋಭ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಭವ್ಯ ಸಹಕರಿಸಿದರು. ಸುಮಾರು 7 ಸ್ಥಳದಲ್ಲಿ 96 ನಾಯಿಗಳಿಗೆ ಲಸಿಕೆ ಮಾಡಲಾಯಿತು.