ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ರೂ.1.09ಲಕ್ಷ ಲಾಭ, ಶೇ.10 ಡಿವಿಡೆಂಡ್, 52 ಪೈಸೆ ಬೋನಸ್

ಪುತ್ತೂರು: ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ರೂ.1,09,010.30 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಲೀಟರ್ 52 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಆ.19ರಂದು ಸಂಘದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು 84 ಸದಸ್ಯರಿಂದ ರೂ.16,800 ಪಾಲು ಬಂಡವಾಳ ಹೊಂದಿದೆ. ವಾರ್ಷಿಕವಾಗಿ 99,650ಲೀಟರ್ ಹಾಲು ಖರೀದಿಸಿ, 92,327 ಲೀಟರ್ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಿದೆ. 10,012 ಲೀಟರ್ ಹಾಲು ಸ್ಥಳಿಯವಾಗಿ ಮಾರಾಟ ಮಾಡಿದೆ. 518 ಲೀಟರ್ ಮಾದರಿ ಹಾಲು ಮಾರಾಟ ಮಾಡಿದೆ. ಹಾಲು ವ್ಯವಹಾರ, ಪಶು ಆಹಾರ ವ್ಯಾಪಾರ ಹಾಗೂ ಇತರ ವ್ಯವಹಾರದಿಂದ ಒಟ್ಟು 5.97096.43 ಆದಾಯ ಗಳಿಸಿದೆ. ಸಂಘದ ಸಂಪೂರ್ಣ ವೆಚ್ಚ ಕಳೆದ ರೂ.1,09,010.33 ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ನಿಬಂಧನೆಯAತೆ ವಿಂಗಡಿಸಲಾಗಿದೆ ಎಂದು ಹೇಳಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಇಲಾಖೆ ಹಾಗೂ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿ ಅವುಗಳನ್ನು ಸದುಪಯೋಗ ಪಡೆದುಕೊಂಡು ಅಧಿಕ ಲಾಭ ಪಡೆಯುವಂತೆ ತಿಳಿಸಿದರು.


ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಅಂಬ್ರೋಸ್ ಡಿ ಸೋಜ ಅಗರ್ತಬೈಲು(ಪ್ರ), ಜತ್ತಪ್ಪ ಪೂಜಾರಿ ಕಾಡ್ಲ(ದ್ವಿ) ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತಿಸಲಾಯಿತು.


ವಿದ್ಯಾರ್ಥಿ ವೇತನ ವಿತರಣೆ:
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು 2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಜ್ಞಾ ಶೆಟ್ಟಿ ಎ., ಆತ್ಮಿಕಾ ಕೆ.ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೃತಿಕಾ ಆರ್.ಕೆ. ಹಾಗೂ ಧನ್ವಿತ್ ಎಂ.ಎನ್‌ರವರಿಗೆ ನೀಡಿ ಅಭಿನಂದಿಸಿಲಾಯಿತು.


ಉಪಾಧ್ಯಕ್ಷ ಎನ್.ಅಂಬ್ರೋಸ್ ಡಿ’ಸೋಜ, ನಿರ್ದೇಶಕರಾದ ಕೆ. ಚಂದಪ್ಪ ಪೂಜಾರಿ ಕಾಡ್ಲ, ಶಿವರಾಮ ಭಟ್ ಕೆ., ವಿನಯ ಕುಮಾರ್ ರೈ ಜಿ., ಎ. ರಾಜೇಶ್ ನಾಯ್ಕ, ದೇವದಾಸ ಎನ್.ರೈ, ಟಿ.ಸತೀಶ್ ಶೆಟ್ಟಿ, ವಾರಿಜ ರೈ ಎ., ಕೆ. ಅಮಿತ್ ರೈ ಹಾಗೂ ಲಕ್ಷ್ಮೀ ರೈ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಆರೋಗ್ಯ ಶಿಬಿರ:
ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಆಯುಷ್ಮಾನ್ ಆರೋಗ್ಯ ಕೇಂದ್ರ ಸಾಜ ಇವರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.
ಸಂಘದ ಸದಸ್ಯ ನಾಗೇಶ್ ಪ್ರಾರ್ಥಿಸಿದರು. ಅಧ್ಯಕ್ಷ ಎ.ಎಂ ಪ್ರವೀಣಚಂದ್ರ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ಜನಾರ್ದನ ಕೆ. ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ನಿರ್ದೇಶಕ ಅಂಬ್ರೋಸ್ ಡಿ’ಸೋಜಾ ಅಗರ್ತಬೈಲು ವಂದಿಸಿದರು. ಹಾಲು ಪರೀಕ್ಷಕ ಮನೋಜ್ ಸಹಕರಿಸಿದರು.

ಸದಸ್ಯರೆಲ್ಲರ ಸಹಕಾರ ಸಂಘವು ಬೆಳವಣಿಗೆಯಾಗುತ್ತಿದೆ, ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿಯೂ ಉತ್ತಮ ವ್ಯವಹಾರ ನಡೆಸಿ ಸಂಘವು ಲಾಭಗಳಿಸುವಲ್ಲಿ ಸಹಕಾರಿಯಾಗಿದೆ. ಹೈನುಗಾರಿಕೆ ಅಭಿವೃದ್ಧಿ ಮತ್ತು ಶುದ್ಧ ಹಾಲು ಉತ್ಪಾದನೆಗೆ ಸಂಘದಿಂದ ಮಾರ್ಗದರ್ಶನ ನೀಡಲಾಗುವುದು. ಸಂಘದ ಕಟ್ಟಡವನ್ನು ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
-ಎ.ಎಂ ಪ್ರವೀಣ್ ಚಂದ್ರ ಆಳ್ವ, ಅಧ್ಯಕ್ಷರು

LEAVE A REPLY

Please enter your comment!
Please enter your name here