ಪುತ್ತೂರು: ಅಕ್ಷಯ ಕೆರಿಯರ್ ಅಕಾಡೆಮಿ ಮತ್ತು ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಹಯೋಗದಲ್ಲಿ ಪುತ್ತೂರಿನ ದರ್ಬೆ ಆರಾಧ್ಯ ಆರ್ಕೆಡ್ನಲ್ಲಿ ಒಂದು ವರ್ಷದ ಡಿಪ್ಲೊಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ನ ಎರಡನೇ ಬ್ಯಾಚ್ ಮತ್ತು ಸ್ಯಾಪ್ ಕೋರ್ಸ್ ಬ್ಯಾಚ್ ಪ್ರಾರಂಭವಾಯಿತು.
ಅಕ್ಷಯ ಕಾಲೇಜಿನ ಚೇರ್ಮೆನ್ ಜಯಂತ್ ನಡುಬೈಲು ಮಾತನಾಡಿ, ದರ್ಬೆ ಬೈಪಾಸ್ ರಸ್ತೆಯ ಫಾ.ಪತ್ರಾವೋ ಸರ್ಕಲ್ ಬಳಿಯ ಆರಾಧ್ಯ ಆರ್ಕೇಡ್ನ ಮೂರನೇ ಮಹಡಿಯಲ್ಲಿ ಅಕ್ಷಯ
ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಅಕ್ಷಯ ಕಾಲೇಜು ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಜಂಟಿ ಸಹಯೋಗದಲ್ಲಿ ‘ಅಕ್ಷಯ ಕೆರಿಯರ್ ಅಕಾಡೆಮಿ’ ಸಂಸ್ಥೆಯನ್ನು ಸ್ಥಾಪಿಸಿ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಏವಿಯೇಶನ್, ಸ್ಯಾಪ್,ಬ್ಯಾಟ್ ಅಲ್ಪಾವಧಿ ಕೋರ್ಸ್ಗಳನ್ನು ಹುಟ್ಟು ಹಾಕಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪುವಿಕೆಗೋಸ್ಕರ
ಉದ್ಯೋಗಪೂರಕ ವೃತ್ತಿಪರ ಕೋರ್ಸ್ಗಳ ಪ್ರಾರಂಭವಾಗಿದೆ. ನಮಗೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿವಿಧ ಕೋರ್ಸ್ಗಳ ಮೂಲಕ ಉದ್ಯೋಗಾವಕಾಶಗಳನ್ನು ಪಡೆಯಬಹುದು ಮತ್ತು ನಾವು ಉತ್ತಮ ಪ್ರೋತ್ಸಾಹ ನೀಡಿ ಉದ್ಯೋಗ ಪಡೆಯಲು ಪ್ರೇರೇಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮಂಗಳೂರು ಕೆರಿಯರ್ ಡೆಸ್ಟಿನಿ ಇದರ ಮುಖ್ಯಸ್ಥೆ ಜಯಶ್ರೀ ಮಾತನಾಡಿ, ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯಿಂದ ಬಂದು ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏವಿಯೇಶನ್ ಶಿಕ್ಷಣವನ್ನು 2021ರಿಂದಲೇ ಪ್ರಾರುಂಭಿಸಿದ್ದು, ಹಿಂದಿನ ಬ್ಯಾಚಿನ ವಿದ್ಯಾರ್ಥಿಗಳು ಇದೀಗ ಬೆಂಗಳೂರು ಮತ್ತುಮಂಗಳೂರಿನ ಏರ್ಪೋರ್ಟ್ನಲ್ಲಿ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪದವಿ ನಂತರ ಪ್ರೊಫೆಶನಲ್ ಕೋರ್ಸ್ ಕಲಿಯುವುದು ಬಹಳ ಮುಖ್ಯ ,ಪಿಯುಸಿ ಆದವರಿಗೆ ಒಂದು ವರ್ಷ ಹಾಗೂ ಪದವಿ ಆದವರಿಗೆ ಆರು ತಿಂಗಳ ಈ
ಏವಿಯೇಶನ್ ಕೋರ್ಸ್ ಅನ್ನು ಮಾಡಬಹುದಾಗಿದೆ ಎಂದರು.

ಜುಂಬಾ ಪ್ರಮಾಣೀಕೃತ ಫಿಟೆಸ್ ತರಬೇತುದಾರ ದೇವಿಪ್ರಸಾದ್ ಮಾತನಾಡಿ, ವಾಯುಯಾನ ಕ್ಷೇತ್ರದಲ್ಲಿ ಅಗತ್ಯವಿರುವ ಜ್ಞಾನ ,ಕೌಶಲ್ಯ ಮತ್ತು ಫಿಟೆಸ್ ಪ್ರಮುಖ ಅಂಶಗಳ ಬಗ್ಗೆ ವಿವರಿಸಿದರು..ಮಾನವ ಸಂಪನ್ಮೂಲ ವ್ಯವಸ್ಥಾಪಕ ಭರತ್ ಒಲ್ತಾಜೆ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ,ಎಚ್ಆರ್ ಕೋ ಆರ್ಡಿನೇಟರ್ ಯಾಮಿನಿ ಉಪಸ್ಥಿತರಿದ್ದರು.