ಪ್ರಾಕೃತಿಕ ವಿಕೋಪದಿಂದ ಕೃಷಿ ನಾಶಗಳಿಗೆ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ಪರಿಹಾರ ಒದಗಿಸಬೇಕು -ಎಸ್.ಡಿ.ಪಿ.ಐ ಆಗ್ರಹ

0

ಸವಣೂರು: ದಕ್ಷಿಣ ಕನ್ನಡ ಜಿಲ್ಲೆಯ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆ.19ರಂದು ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಗಾಳಿಗೆ ಸವಣೂರು ಗ್ರಾಮದ ಇಡ್ಯಾಡಿ,ಅತಿಕರೆ,ಅರೆಲ್ತಡಿ, ಕೆಡೆಂಜಿ ಹಾಗೂ ಇನ್ನೂ ಅನೇಕ ಸ್ಥಳಗಳಲ್ಲಿ ಜೀವನ ನಡೆಸಲು ಆದಾಯದ  ಮೂಲವಾಗಿರುವ  ಅಡಿಕೆ, ಮತ್ತು ತೆಂಗು ಕೃಷಿಕರು ಕಷ್ಟಪಟ್ಟು ಬೆಳೆಸಿದ ಬಹಳಷ್ಟು ಜನರ ಕೃಷಿಯು ಸಂಪೂರ್ಣ ನಾಶವಾಗಿರುತ್ತದೆ. ಇದು ಒಂದು ಪ್ರಾಕೃತಿಕ ವಿಕೋಪ ವಾಗಿದ್ದು, ರಾಜ್ಯ ಸರ್ಕಾರದ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಲ್ಲಿ ಈಗ ಪರಿಹಾರಕ್ಕೆ ಅವಕಾಶ ಇರುವುದಿಲ್ಲ. ಆದ್ದರಿಂದ ಈ ರೀತಿಯ ಕೃಷಿ ನಾಶಗಳನ್ನು ಕೂಡ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ತರಬೇಕು. ಅಥವಾ ತುರ್ತಾಗಿ ಸರಕಾರ ತೋಟಗಾರಿಕೆ ಇಲಾಖೆಯ ಮೂಲಕ ಕೃಷಿ ನಾಶ ನಷ್ಟ ಅನುಭವಿಸಿರುವ ಕೃಷಿಕರಿಗೆ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರವನ್ನು ಒದಗಿಸಬೇಕೆಂದು ಸರಕಾರವನ್ನು, ಸಂಬಂಧಪಟ್ಟ ಸಚಿವರನ್ನು, ತೋಟಗಾರಿಕೆ ಇಲಾಖೆಯನ್ನು ಕೃಷಿಕರ ಯೋಗಕ್ಷೇಮವನ್ನು ಮುಂದಿಟ್ಟುಕೊಂಡು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ ಎಂದು ಎಸ್.ಡಿ.ಪಿ.ಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ,ಸವಣೂರು ಗ್ರಾ.ಪಂ.ಸದಸ್ಯ ರಫೀಕ್ ಎಂ.ಎ.ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here