ನಿಡ್ಪಳ್ಳಿ; ಇರ್ದೆ ಗ್ರಾಮದ ದೈಯ್ಯಾರಡ್ಕ ನಿವಾಸಿ, ನಿವೃತ್ತ ಜವಾನ ರಾಮಣ್ಣ ನಾಯ್ಕ ( 92 ವ) ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಆ.20 ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಸುಮಾರು 25 ವರ್ಷಗಳ ಕಾಲ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಜವಾನರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು .ಮೃತರು ಪತ್ನಿ ಸರಸ್ವತಿ, ಪುತ್ರರಾದ ನಾರಾಯಣ ನಾಯ್ಕ, ಪುರಂದರ ನಾಯ್ಕ, ಬಾಲಕೃಷ್ಣ ನಾಯ್ಕ, ದಾಮೋದರ ನಾಯ್ಕ, ಕುಶಾಲಪ್ಪ ನಾಯ್ಕ, ಪುತ್ರಿ ಜಲಜಾಕ್ಷಿ, ಸೊಸೆಯಂದಿರಾದ ಇಂದಿರಾ, ಶಾರದಾ, ಮೋಹಿನಿ, ಪದ್ಮಾವತಿ, ಅನಿತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.