ರಾಮಕುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೋಕುಲನಗರ, ಕೊಯಿಲ-ರಾಮಕುಂಜ ಇದರ ಆಶ್ರಯದಲ್ಲಿ 43ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಆ.17ರಂದು ಕೊಯಿಲ-ಗೋಕುಲನಗರದಲ್ಲಿ ನಡೆಯಿತು.
ಬೆಳಿಗ್ಗೆ ಅಷ್ಟಮಿ ಕಟ್ಟೆಯಲ್ಲಿ ಆತೂರು ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಅವರು ಪೂಜಾ ವಿಧಿ ವಿಧಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ಅಟೋಟ ಸ್ಪರ್ಧೆಗಳು ನಡೆಯಿತು. ಸಾಯಂಕಾಲ ನಡೆದ ಸಮಾರೋಪದಲ್ಲಿ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಪ್ರಭಾರ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಧಾರ್ಮಿಕ ಭಾಷಣ ಮಾಡಿದರು.
ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಎಸ್.ಶೆಟ್ಟಿ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಬಿ.ಸುಚೇತಾ ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಬಡಿಲ ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಚಿತ್ತರಂಜನ್ ರಾವ್ ಬದೆಂಜ ಅವರನ್ನು ಸನ್ಮಾನಿಸಲಾಯಿತು. ಕೊಯಿಲ ಗ್ರಾ.ಪಂ ಸ್ವಚ್ಛತಾ ಸಿಬ್ಬಂದಿಗಳಾದ ವಸಂತಿ ಕಲ್ಕಾಡಿ, ಸರೋಜಿನಿ ಏಣಿತ್ತಡ್ಕ, ರಾಮಕುಂಜ ಗ್ರಾ.ಪಂ.ನ ಸುಮತಿ ಕಲ್ಲೇರಿ, ಯಶೋಧ ಶಾರದಾನಗರ ಅವರನ್ನು ಗೌರವಿಸಲಾಯಿತು.
ಪುಟಾಣಿಗಳಿಗೆ ನಡೆದ ಶ್ರೀಕೃಷ್ಣ ವೇಷ ಸ್ಪರ್ದೆ, ಜನ್ಮಾಷ್ಟಮಿ ಪ್ರಯುಕ್ತ ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಪಲ್ಲಡ್ಕ ವರದಿ ವಾಚಿಸಿದರು. ಕ್ರೀಡಾ ಕಾರ್ಯದರ್ಶಿ ಸುಧೀಶ್ ಪಟ್ಟೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಕ್ರೀಡಾ ಜೊತೆ ಕಾರ್ಯದರ್ಶಿ ಅಭಿನವ್ ಆನೆಗುಂಡಿ ಸ್ವಾಗತಿಸಿದರು. ಸಮಿತಿ ಸಂಚಾಲಕರಾದ ಪ್ರಕಾಶ್ ಕೆ.ಆರ್.ವಂದಿಸಿದರು. ಗಣೇಶ್ ಕೇದಗೆದಡಿ ನಿರೂಪಿಸಿದರು. ಬಳಿಕ ವಿವಿಧ ಭಜನಾ ತಂಡಗಳಿಂದ ಭಜನೆ ಸೇವೆ ನಡೆಯಿತು. ಸಮಿತ ಗೌರವಾಧ್ಯಕ್ಷ ಉದಯ ಕಶ್ಯಪ್ ಪೂರಿಂಗ ಮತ್ತು ಉಪಾಧ್ಯಕ್ಷ ಬಾಬು ಕುಲಾಲ್ ಭಜನೆಗೆ ಚಾಲನೆ ನೀಡಿದರು.