ನಿಡ್ಪಳ್ಳಿ: ಪಾಣಾಜೆ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.20 ರಂದು ನಡೆದ ಬೆಟ್ಟಂಪಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚೂರಿಪದವು ಹಿರಿಯ ಪ್ರಾಥಮಿಕ ಶಾಲೆ ಕಿರಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಹಿರಿಯ ವಿಭಾಗದ ಅಭಿನಯ ಗೀತೆಯಲ್ಲಿ ಶಹಮ ಪ್ರಥಮ, ಕಥೆ ಹೇಳುವುದರಲ್ಲಿ ಕಿರಿಯ ರಮ್ಯ ಪ್ರಥಮ, ಕ್ಲೇಮೋಡಲಿಂಗ್ ಕಿರಿಯ ಮನ್ ದೀಪ್ ಪ್ರಥಮ, ಕನ್ನಡ ಕಂಠಪಾಠ ಹಿರಿಯ ಆಯಿಷತ್ ಸಫಾ ಪ್ರಥಮ, ಇಂಗ್ಲೀಷ್ ಕಂಠಪಾಠ ಕಿರಿಯ ಮುಹಮ್ಮದ್ ಶಮ್ಮಾಸ್ ದ್ವಿತೀಯ, ಅರೇಬಿಕ್ ಪಠಣ ಕಿರಿಯ ಫಾತಿಮತ್ ಅಲ್ಫಾ ದ್ವಿತೀಯ, ಚಿತ್ರಕಲೆ ಹಿರಿಯ ಪೂರ್ಣೇಶ್ ದ್ವಿತೀಯ, ಪ್ರಬಂಧ ಹಿರಿಯ ಫಿದಾ ದ್ವಿತೀಯ, ಆಶುಭಾಷಣ ಕಿರಿಯ ಆಯಿಷ ಅಲೀಝ ದ್ವಿತೀಯ, ಛದ್ಮವೇಷ ಕಿರಿಯ ಮೊಹಮ್ಮದ್ ಸಫ್ಫಾಹ್ ತೃತೀಯ, ಆಶುಭಾಷಣ ಹಿರಿಯ ಕಾಮಿಲ್ ತೃತೀಯ, ಕವನ ವಾಚನ ಹಿರಿಯ ಆಯಿಷತ್ ಸಫಾ ತೃತೀಯ, ಹಿಂದಿ ಕಂಠಪಾಠ ಹಿರಿಯ ಫಿದ ತೃತೀಯ , ಚಿತ್ರಕಲೆ ಕಿರಿಯ ಹರ್ಷಿತಾ ತೃತೀಯ ಸ್ಥಾನಗಳನ್ನು ಪಡೆದು ಕೊಂಡಿದ್ದಾರೆ ಎಂದು ಶಾಲಾ ಮುಖ್ಯ ಗುರು ಲಕ್ಷ್ಮಿ ತಿಳಿಸಿದ್ದಾರೆ.
