ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಆ.23, ಆ.30, ಸೆ.6, ಸೆ.13 ರಂದು ಸೋಣ ಶನಿವಾರ ಆಚರಣೆ ನಡೆಯಲಿರುವುದು.
ಆಚರಣೆಗೆ ಬಲಿವಾಡಿನೊಂದಿಗೆ ಬಲಿವಾಡಿಗೆ ಬೇಕಾದ ಅಕ್ಕಿ, ತೆಂಗಿನಕಾಯಿ ದೇವಸ್ಥಾನದಲ್ಲಿ ದೊರೆಯುತ್ತದೆ. ಆ.23 ರಂದು ಬೆಳಿಗ್ಗೆ ಅಶ್ವತ್ಥ ಪೂಜೆ, ನಾಗತಂಬಿಲ, ವಿಶೇಷ ಸತ್ಯನಾರಾಯಣ ಪೂಜೆ, ದೇವರಿಗೆ ಹಾಲು ಪಾಯಸ ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ, ಆ.27 ರಂದು ಬೆಳಿಗ್ಗೆ ಗಣೇಶ ಚತುರ್ಥಿ ಗಣಪತಿ ಹೋಮ, ಆ29 ರಂದು ತಿಂಗಳ ಷಷ್ಠಿ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತರು ಶ್ರದ್ಧಾ ಭಕ್ತಿಯ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 7795711499, 9980223709 ನಂಬರಿಗೆ ಸಂಪರ್ಕಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.