ಆ.22: ಅಂಬಿಕಾ ವಿದ್ಯಾಲಯದಲ್ಲಿ ನೂತನ ಮೇಲಂತಸ್ತು ಹಾಗೂ ಕಾಂಪೋಸಿಟ್ ಲ್ಯಾಬ್ ಲೋಕಾರ್ಪಣೆ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ ಕಳೆದ ವರ್ಷ ತನ್ನ ದಶಮಾನೋತ್ಸವ ಕಾರ್ಯಕ್ರಮವಾದ ದಶಾಂಬಿಕೋತ್ಸವ ಆಚರಿಸಿದ ಸವಿನೆನಪಿಗಾಗಿ ರೂಪಿಸಲಾಗಿರುವ ನೂತನ ಮೇಲಂತಸ್ತು ಕಟ್ಟಡ ಹಾಗೂ ಕಾಂಪೋಸಿಟ್ ಲ್ಯಾಬ್‌ನ ಉದ್ಘಾಟನಾ ಸಮಾರಂಭ ಆಗಸ್ಟ್ 22ರಂದು ಬೆಳಗ್ಗೆ 8.45ಕ್ಕೆ ನಡೆಯಲಿದೆ.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ ಅಧ್ಯಕ್ಷತೆ ವಹಿಸುವರು. ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಟಾನದ ಸಂಚಾಲಕ ವೇದಮೂರ್ತಿ ಪುರೋಹಿತ ನಾಗರಾಜ ಭಟ್ ಉದ್ಘಾಟಿಸಲಿದ್ದಾರೆ. ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಮಹೇಶ ಕಜೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಹಾಗೂ ಪ್ರಾಚಾರ್ಯೆ ಮಾಲತಿ ಡಿ. ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here