ಪುತ್ತೂರು: ದೋಲ್ಪಾಡಿ, ಕ್ಯಾಮಣ, ಕೂರೇಲು ಪ್ರದೇಶದಲ್ಲಿ ಆ.19ರಂದು ಮುಂಜಾನೆ ಬೀಸಿದ ಬಿರುಗಾಳಿ ಅಬ್ಬರಕ್ಕೆ ಹಾನಿಗೊಂಡಿರುವ ಪ್ರದೇಶಗಳಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಕೆಪಿಸಿಸಿ ಸಂಯೋಜಕ ಜಿ. ಕೃಷ್ಣಪ್ಪ ರಾಮಕುಂಜ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತ ಮನೆಯವರನ್ನು ಭೇಟಿ ಮಾಡಿ ನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡು ಇಲಾಖಾ ಅಧಿಕಾರಿಗಳಿಗೆ ಕರೆ ಮಾಡಿ ಅಗತ್ಯ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ದೋಳ್ಪಾಡಿಯ ರಾಮಕೃಷ್ಣ, ಕೂರೇಲುವಿನ ಯಶೋಧರ ಮೊದಲಾದವರ ತೋಟಗಳಲ್ಲಿ ಹಾನಿಯಾಗಿರುವ ಕೃಷಿ, ತೋಟಗಳನ್ನು ಪರಿಶೀಲನೆ ನಡೆಸಿ ಬಳಿಕ ಸ್ಥಳದಿಂದಲೇ ತಹಸೀಲ್ದಾರ್, ಕೃಷಿ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಪರಿಹಾರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಕಡಬ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್. ಆದಂ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರವೀಣ ರೈ, ಪ್ರಶಾಂತ್ ರೈ ಮತ್ತಿತರರು ಉಪಸ್ಥಿತರಿದ್ದರು.