ತಾ. ಮಟ್ಟದ ಶಟಲ್ ಬ್ಯಾಡ್ಮಿಂಟನ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕಡಬ ಸೈಂಟ್ ಆನ್ಸ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ  ಬಾಲಕಿಯರ 14ನೇ ವಯೋಮಾನದ ವಿಭಾಗದಲ್ಲಿ ಪಂಜಳ ಶಾಂತಿಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ರಿಶಾ ಎಸ್, ಸೋನಾಲಿ ರೈ ಪಿ ಮತ್ತು ಸನಾ ಫಾತಿಮಾ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ.

ವಿಜೇತ ವಿದ್ಯಾರ್ಥಿಗಳನ್ನು  ಹಾಗೂ ದೈಹಿಕ ಶಿಕ್ಷಕಿ ರಾಜೀವಿ ಶೆಟ್ಟಿ ಇವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸಂಸ್ಥೆಯ ಸಂಚಾಲಕರಾದ  ವಂ|ಬಿಜು. ಕೆ.ಜಿ. ಹಾಗೂ ಮುಖ್ಯ ಶಿಕ್ಷಕಿ ಅಶ್ವತಿ ಅರವಿಂದ್ ರವರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here