ಪಾಣಾಜೆ; ಜಾಂಬ್ರಿ ಗುಹಾ ಪರಿಸರದಲ್ಲಿ ಸಸಿ ನಾಟಿ

0

ನಿಡ್ಪಳ್ಳಿ; ಪಾಣಾಜೆಯ ಪ್ರಸಿದ್ದ  ಜಾಂಬ್ರಿ ಗುಹಾ ಪರಿಸರದ ರಸ್ತೆಯ ಇಕ್ಕೆಳಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿವಿಧ ಜಾತಿಯ ಸಸಿ ನಾಟಿ ಕಾರ್ಯಕ್ರಮ ಆ.22 ರಂದು ನಡೆಯಿತು.

    ಪಾಣಾಜೆ ಪಂಚಾಯತ್ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಜಯಶ್ರೀ, ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಸುಬೋಧ ಪ್ರೌಢ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್, ಉಪ ವಲಯ ಅರಣ್ಯಾಧಿಕಾರಿ ಮದನ್, ಗಸ್ತು ಅರಣ್ಯ ಪಾಲಕರಾದ ಸುನೀಶ್ ಬಾಬು, ಪ್ರಜ್ಞಾ, ವಾಚರ್ ದೇವಪ್ಪ ನಾಯ್ಕ ಉಪಸ್ಥಿತರಿದ್ದರು.

 ಅಂದಾಜು ಸುಮಾರು 2.5 ಹೆಕ್ಟೇರ್ ಪ್ರದೇಶದಲ್ಲಿ ಗೋಳಿ, ಅಶ್ವಥ, ಅತ್ತಿ, ಬಸ್ರಿ, ಮಾವು, ನೇರಳೆ ಮುಂತಾದ ವಿವಿಧ ಜಾತಿಯ ಹಣ್ಣು ಕೊಡುವ ಮರದ ಸಸಿಗಳನ್ನು ನೆಡಲಾಗಿದೆ.ಪರಿಸರ ಗಟ್ಟಿ ಮುರ ಕಲ್ಲಿನಿಂದ ಕೂಡಿದ್ದು ಈ ಜಾತಿಯ ಮರಗಳು ಕಲ್ಲಿನಲ್ಲಿಯೂ ಬೆಳೆಯುತ್ತದೆ. ಇದು ಪರಿಸರದಲ್ಲಿ ಪಕ್ಷಿ ಪ್ರಾಣಿಗಳಿಗೂ ಆಹಾರ ಒದಗಿಸಲಿದ್ದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಅರಣ್ಯ ಇಲಾಖೆ ಹಮ್ಮಿಕೊಂಡಿದೆ   ಮದನ್ ಡಿ.ಎಫ್.ಒ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here