ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಜೆ ಸಿ ಐ ವತಿಯಿಂದ ‘ದೀಪೋತ್ಥಾನ’ಕಾರ್ಯಕ್ರಮ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಮತ್ತು ಜೆ ಸಿ ಐ ಆಲಂಕಾರು ಇದರ ಸಹಭಾಗಿತ್ವದಲ್ಲಿ ದಿವಂಗತ ಪ್ರದೀಪ್ ಬಾಕಿಲ ರವರ ಸ್ಮರಣಾರ್ಥ ‘ದೀಪೋತ್ಥಾನ’ ತರಬೇತಿ ಸಪ್ತಾಹ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜರುಗಿತು.


ಕಾರ್ಯಕ್ರಮದಲ್ಲಿ ಆಥರ್ ಮತ್ತು ರಾಷ್ಟ್ರೀಯ ತರಬೇತುದಾರರಾದ ಜೆಸಿಐ Sen ಸೌಜನ್ಯ ಹೆಗ್ಡೆ ಇವರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ದಿ. ಪ್ರದೀಪ್ ಬಾಕಿಲರ ಸ್ಮರಣಾರ್ಥ ಮಾಜಿ ಸೈನಿಕ ರಾಧಾಕೃಷ್ಣ ಇವರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಗುರುರಾಜ್ ರೈ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾಗಿ ಜೆ ಸಿ ಗಣೇಶ್ ಕಟ್ಟಪುಣಿ, ಸದಸ್ಯರು ಜೆ ಸಿ ಐ ಆಲಂಕಾರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಗುರು ಸತೀಶ್ ಭಟ್ ಸ್ವಾಗತಿಸಿದರು. ಪ್ರವೀಣ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here