ಕುಂಬ್ರ: ಹನಿಬೀ ಅಲ್-ಬಿರ್ರ್ ಪ್ರೀ-ಸ್ಕೂಲ್ ನಲ್ಲಿ  ಶುದ್ಧ  ಕುಡಿಯುವ ನೀರಿನ ಯಂತ್ರ ಉದ್ಘಾಟನೆ 

0

ಪುತ್ತೂರು: ಕುಂಬ್ರ ಹನಿಬೀ ಅಲ್-ಬಿರ್ರ್ ಪ್ರೀ-ಸ್ಕೂಲ್ ನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸ್ವಚ್ಛವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೊಸ ನೀರಿನ ಶುದ್ಧಿಕರಣ ಯಂತ್ರವನ್ನು ಆ.23ರಂದು ಉದ್ಘಾಟಿಸಲಾಯಿತು.

ಖ್ಯಾತ ಪ್ರೇರಣಾದಾಯಕ ಭಾಷಣಗಾರ ರಫೀಕ್ ಮಾಸ್ಟರ್ ಉದ್ಘಾಟಿಸಿದರು. ಈ ಶುದ್ಧಿಕರಣ ಯಂತ್ರವನ್ನು ದಾನಿಯಾಗಿ ಡಿಗ್ನಿಟಿ ಗ್ರೂಪ್ ಗೋಲ್ಡ್ ಅಂಡ್ ಡೈಮಂಡ್, ಪುತ್ತೂರು ಸಂಸ್ಥೆಯ  ಬಾತೀಷಾ ಕನಕಮಜಲ್ ಅವರು ಕೊಡುಗೆಯಾಗಿ ನೀಡಿದ್ದರು.


ಕಾರ್ಯಕ್ರಮದಲ್ಲಿ ಮಧುರಾ ಗ್ರೂಪ್ ನ ಅಧ್ಯಕ್ಷ ಹನೀಫ್ ಮಧುರಾ, ಕಾರ್ಯದರ್ಶಿ ಮಿಸ್ರಿಯಾ ಹನೀಫ್ ಮಧುರಾ,  ಡಿಗ್ನಿಟಿ ಗ್ರೂಪ್ ನ ಬಾತಿಷಾ ಕನಕಮಜಲ್, ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್,  ಎಂ ಎಚ್ ಆರ್ಕೇಡ್ ಮ್ಯಾನೇಜರ್ ಸಮದ್, ಶಿಕ್ಷಕಿಯರು ಮತ್ತು ಹಲವಾರು ಮಂದಿ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here