ಭಾರತೀಯ ಸೇನೆಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯದ ಯುವತಿ
ಪುತ್ತೂರು: ಅತ್ಯುತ್ತಮ ತರಬೇತಿಯ ಮೂಲಕ ಭಾರತೀಯ ಸೇನೆಗೆ ಗ್ರಾಮೀಣ ಪ್ರದೇಶದ ಯುವಕ ಯುವತಿಯರು ನಿರಂತರವಾಗಿ ಸೇರ್ಪಡೆಗೊಳ್ಳಲು ಕಾರಣವಾಗಿರುವ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ನಿರಂತರವಾಗಿ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಪ್ರಯತ್ನಿಸುತ್ತಾ ಅಂತಿಮವಾಗಿ ಭಾರತೀಯ ಗಡಿ ರಕ್ಷಣಾ ಪಡೆ ( BSF )ಗೆ ಸಿಬ್ಬಂದಿ ನೇಮಕಾತಿ ಆಯೋಗ ( SSC )ನಡೆಸಿದ ಪರೀಕ್ಷೆಯಲ್ಲಿ ಸುಶ್ಮಿತಾ ಆಯ್ಕೆಯಾಗಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ತಲೆ, ಸರಕಾರಿ ಪ್ರೌಢಶಾಲೆ ಮರ್ಕಂಜ, NMPU ಅರಂತೋಡು, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿನಿ.ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರಪಣೆಯ ನಾಗಪ್ಪ ಎಂ.ಎ. ಹಾಗೂ ಜಾನಕಿ ದಂಪತಿಗಳ ಪುತ್ರಿ. ಇವರ ಆಯ್ಕೆಯ ಮೂಲಕ ವಿದ್ಯಾಮಾತಾದ ಸಾಧನೆಯ ಮುಕುಟಕ್ಕೆ ಗರಿಯೊಂದು ಸೇರಿದೆ.
ನಿರಂತರವಾಗಿ ಪ್ರತಿ ವರ್ಷ ಗ್ರಾಮೀಣ ಪ್ರದೇಶದ ನೂರಾರು ಯುವಕ ಯುವತಿಯರು ಭಾರತೀಯ ಸೇನೆಗೆ ಸೇರಬೇಕೆಂಬ ನಮ್ಮ ಕನಸು ಈ ಮೂಲಕ ನೇರವೇರುತ್ತಿದೆ ಎನ್ನಬಹುದು. ಭಾರತೀಯ ಗಡಿ ಭದ್ರತಾ ಪಡೆಗೆ ಆಯ್ಕೆ ಆಗಿರುವುದಕ್ಕೆ ವಿದ್ಯಾಮಾತಾ ಅಕಾಡೆಮಿ ತರಬೇತಿದಾರರು, ಹಿತೈಷಿಗಳು ಹಾಗೂ ವೈಯಕ್ತಿಕ ನೆಲೆಯಲ್ಲಿ ಸುಶ್ಮಿತಾಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕಳೆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ತರಬೇತಿ ಬ್ಯಾಚಿನಲ್ಲಿ ನಮ್ಮಲ್ಲಿ ತರಬೇತಿ ಪಡೆದುಕೊಂಡಿದ್ದು, ನಿರಂತರ ಅವರ ಪರಿಶ್ರಮವಿಂದು ಫಲ ನೀಡಿದೆ. –
ಭಾಗ್ಯೇಶ್ ರೈ
ಆಡಳಿತ ನಿರ್ದೇಶಕರು ವಿದ್ಯಾಮಾತಾ ಅಕಾಡೆಮಿ