ಪುತ್ತೂರು:ಮಂಗಳೂರಿನ ವಿ.ಟಿ ರಸ್ತೆಯಲ್ಲಿರುವ ವಿಠೋಬಾ ರುಕುಮಾಯಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಭುವನೇಂದ್ರ ಸ್ವಾಮೀಜಿ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ 15ನೇ ವಾರ್ಷಿಕ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರಾದ ಎಸ್ ಸತೀಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ಸೆ.7 ರಂದು ಜರಗಲಿರುವುದು.
ಸಭೆಯ ನೋಟೀಸನ್ನು ಅಂಚೆ ಮೂಲಕ ಈಗಾಗಲೇ ಕಳುಹಿಸಲಾಗಿದ್ದು ನೋಟೀಸು ಸಿಗದ ಸಹಕಾರಿಯ ಸದಸ್ಯರೆಲ್ಲರೂ ಇದನ್ನೇ ನೋಟೀಸು ಎಂದು ಪರಿಗಣಿಸಿ ಸಭೆಗೆ ಹಾಜರಾಗಿ ಸಹಕಾರಿಯ ಉನ್ನತಿಗಾಗಿ ಸಲಹೆ ಸೂಚನೆಗಳನ್ನು ನೀಡತಕ್ಕದ್ದು ಹಾಗೂ ಹೆಚ್ಚಿನ ಮಾಹಿತಿಗಾಗಿ 9481149203, 9902000343 ನಂಬರಿಗೆ ಸಂಪರ್ಕಿಸಬಹುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಮಲಾಕ್ಷ ಎಚ್.ಎಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.