ಬಡವರ ಕೆಲಸ ಮಾಡುವಲ್ಲಿ ತೀವ್ರ ಉದಾಸೀನ

0

ಬಂಟ್ವಾಳ ತಹಶೀಲ್ದಾರ್ ಸಹಿತ ಹಲವು ಕಂದಾಯ ಅಧಿಕಾರಿಗಳ ಎತ್ತಂಗಡಿ: ಶಾಸಕ ಅಶೋಕ್ ರೈ


ಪುತ್ತೂರು: ಅಕ್ರಮ ಸಕ್ರಮ ಕಡತವಿಲೇವಾರಿ, 94ಸಿ, 94ಸಿಸಿ ಕಡತ ವಿಲೇವಾರಿ ಮಾಡುವಲ್ಲಿ ತೀವ್ರ ಉದಾಸೀನತೆ ತೋರಿ ಬಡವರ ಕೆಲಸ ಮಾಡುವಲ್ಲಿ ವಿಫಲವಾಗಿರುವ ಬಂಟ್ವಾಳ ತಹಶೀಲ್ದಾರ್ ಸಹಿತ ಕೆಲವು ಕಂದಾಯ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಬಂಟ್ವಾಳ ತಾಲೂಕು ಕೃಷಿ ಇಲಾಖೆ ವತಿಯಿಂದ ವಿಟ್ಲದಲ್ಲಿ ಕೃಷಿ ಸೌಲಭ್ಯ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
94 ಸಿ, 94ಸಿಸಿ ಕೇವಲ 5 ಅಥವಾ 9 ಸೆಂಟ್ಸ್ ಜಾಗದಲ್ಲಿ‌ ಮನೆ ಕಟ್ಟಿ ವಾಸವಿರುವ ಬಡವರಿಗೆ ಜಾಗದ ಹಕ್ಕು ಪತ್ರ ಕೊಡ್ಲಿಕ್ಕೆ ಹಿಂದೆ ಮುಂದೆ ನೋಡುತ್ತಾರೆ.‌ ಯಾವ ಅಧಿಕಾರಿಯೂ ಅವರ ಜಾಗವನ್ನು ಕೊಡುವುದಲ್ಲ, ಶಾಸಕನಾದ ‌ನನ್ನ ಜಾಗವನ್ನು ಕೊಡುವುದಲ್ಲ, ಅನೇಕ ವರ್ಷಗಳಿಂದ ಮನೆ ಕಟ್ಟಿಕೊಂಡಿರುವ ಕುಟುಂಬಗಳಿಗೆ ಇವರು ಯಾಕೆ ಹಕ್ಕು ಪತ್ರ ಕೊಡುತ್ತಿಲ್ಲ? ಯಾರೆಲ್ಲಾ ಇದಕ್ಕೆ ಅರ್ಜಿ ಕೊಟ್ಟಿದ್ದಾರೋ ಕಾನೂನು ಪ್ರಕಾರ ಸರಿ ಇದ್ದ ಎಲ್ಲರಿಗೂ ಹಕ್ಕು ಪತ್ರ ಕೊಟ್ಟೇ ಕೊಡ್ತೇನೆ. ಬಡವರ ಪರ ಕಾಳಜಿ ಇಲ್ಲದ,ಉದಾಸೀನತೆ ತೋರುವ ಅಧಿಕಾರಿಗಳನ್ನು ಶೀಘ್ರವೇ ಎತ್ತಂಗಡಿ ಮಾಡಲಾಗುವುದು ಎಂದು ಹೇಳಿದ ಶಾಸಕರು ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here