ಮೋನಪ್ಪ ಪುರುಷ ಗೌರವಾಧ್ಯಕ್ಷ, ದಯಾನಂದ ಜೋಗಿ ಅಧ್ಯಕ್ಷ, ಹರೀಶ್ಚಂದ್ರ ಜೋಗಿ ಪ್ರ.ಕಾರ್ಯದರ್ಶಿ
ಪುತ್ತೂರು: ನಾಥ ಪಂಥೀಯ ಜೋಗಿ ಸಮಾಜ ಸುಧಾರಕ ಸಂಘದ ನೂತನ ಗೌರವಾಧ್ಯಕ್ಷರಾಗಿ ಮೋನಪ್ಪ ಪುರುಷ ಮುಗೇರಡ್ಕ, ಅಧ್ಯಕ್ಷರಾಗಿ ದಯಾನಂದ ಜೋಗಿ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ಚಂದ್ರ ಜೋಗಿ ಮಾಯಂಗಲ, ಸಂಚಾಲಕರಾಗಿ ಗಂಗಾಧರ್ ಜೋಗಿ ಮುಗೇರಡ್ಕ, ಕೋಶಾಧಿಕಾರಿಯಾಗಿ ರಮೇಶ್ ಜೋಗಿ ಮುಕ್ವೆ ಅವರು ಆಯ್ಕೆಯಾಗಿದ್ದಾರೆ.
ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಆ.24ರಂದು ನರಿಮೊಗರು ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆಯಿತು. ಆಡಳಿತ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ನವೀನ್ ದೋಲ್ದಟ್ಟರವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರುಗಳಾಗಿ ರಘುನಾತ್ ಮಣಿಯ, ಸುಜಾತ ಸತೀಶ್ ಇಂದಿರಾನಗರ, ಸಂಘಟನಾ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಮಣಿಯ, ಜೊತೆ ಕಾರ್ಯದರ್ಶಿಯಾಗಿ ಯೋಗೀನಾಥ್ ಮುಗೇರಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಶಿವ ಕುಮಾರ್ ಜೋಗಿ ಮುಗೇರಡ್ಕ, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಮುಕ್ವೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶ್ವಿನ್ ಜೋಗಿ, ಜೊತೆ ಕೋಶಾಧಿಕಾರಿಯಾಗಿ ರಮೇಶ್ ಜೋಗಿ ಮುಗೇರಡ್ಕ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ:
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ದಯಾನಂದ ಎಂ ಅವರಿಗೆ ನಿರ್ಗಮನ ಅದ್ಯಕ್ಷ ನವೀನ್ ದೋಲ್ದಟ್ಟ ಅವರು ಸಂಘದ ಲೆಕ್ಕಪತ್ರದ ಪುಸ್ತಕವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು.