95 ಕ್ಯಾಂಪ್ ಆಯೋಜನೆ ಮೂಲಕ 35 ಸಾವಿರ ಶಿಬಿರಾರ್ಥಿಗಳಿಗೆ 1.80 ಲಕ್ಷ ಥೆರಪಿ ನೀಡಿರುವ ಸಂಸ್ಥೆ…
ಬಿಪಿ ,ಶುಗರ್ ಸಹಿತ ಹಲವು ಬಗೆಯ ನೋವುಗಳಿಗೆ ಹಾಗೂ ಸಮಸ್ಯೆಗಳಿಗೆ ಥೆರಪಿ ಮೂಲಕ ಚಿಕಿತ್ಸೆ…
ಪುತ್ತೂರು: ಇಲ್ಲಿನ ಮುಖ್ಯರಸ್ತೆ ಕಲ್ಲಾರೆ ಪವಾಝ್ ಸಂಕೀರ್ಣದಲ್ಲಿ ಕಳೆದ ಮೂವತ್ತ ಮೂರು ತಿಂಗಳಿಂದ ಕಾರ್ಯಾಚರಿಸುತ್ತಿದ್ದ, ಕೆ ಪ್ರಭಾಕರ ಸಾಲ್ಯಾನ್ ಇವರ ಮಾಲೀಕತ್ವದ ನೆಮ್ಮದಿ ವೆಲ್ನೆಸ್ ಸೆಂಟರ್ ಇದೀಗ ಬೊಳುವಾರು ಧ್ರುವ ಸಂಕೀರ್ಣ ಇದರ ನೆಲ ಮಹಡಿಗೆ ಸ್ಥಳಾಂತರಗೊಂಡು ಆ.28ರಂದು ಮತ್ತೆ ಶುಭಾರಂಭಗೊಂಡಿತು.

ಅರ್ಚಕ ಪ್ರಸಾದ್ ಪಾಂಗಣ್ಣಾಯ ಬಳಗ ಧಾರ್ಮಿಕ ಕೈಕಂರ್ಯ ನೆರವೇರಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಹರಸಿದರು.
ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ ಹೊಸಮ್ಮ ಅಣ್ಣಪ್ಪ ಪಂಜುರ್ಲಿ ಬ್ರಹ್ಮ ಬೈದರ್ಕಳ ಟ್ರಸ್ಟ್ ಬಾಕಿಲ ಗುತ್ತು ಇದರ ಅಧ್ಯಕ್ಷರಾದ ವಸಂತ ಪೂಜಾರಿ ದೀಪ ಪ್ರಜ್ವಲನೆ ನೆರವೇರಿಸಿ , ಸಂಸ್ಥೆಯನ್ನು ಉದ್ಘಾಟಿಸಿ ಶುಭವನ್ನು ಕೋರಿದರು. ಈ ವೇಳೆ ಜನಾರ್ಧನ ಪೂಜಾರಿ ಬಾಕಿಲಗುತ್ತು , ಬಾಕಿಲಗುತ್ತು ಗರಡಿ ಅರ್ಚಕರಾದ ಶ್ರೀಕೃಷ್ಣ ಶಾಂತಿ, ಉಳ್ಳಾಲ್ತಿ ದೈವದ ಪರಿಚಾರಕರಾದ ಲಕ್ಷ್ಮಣ ಪೂಜಾರಿ ಬಾಕಿಲಗುತ್ತು ,
ಮಾಲೀಕ ಪ್ರಭಾಕರ ಸಾಲಿಯನ್ ಬಾಕಿಲಗುತ್ತು ಇವರ ಮಾತೃ ಶ್ರೀಗಳಾದ ಗಿರಿಜಾ, ಸಹೋದರ ಗಣೇಶ ಸಾಲ್ಯಾನ್ ಮತ್ತು ಅವರ ಮಕ್ಕಳಾದ ಭೂಮಿಕ ಹಾಗೂ ಅಶ್ವಿಕ್, ಸಹೋದರಿ ಭವಾನಿಯವರ ಪುತ್ರಿ ಕೀರ್ತಿ, ಲಕ್ಷ್ಮೀ ವೆಂಕಟರಮಣ ವುಡ್ ಆರ್ಟ್ ಮಾಲೀಕ ದಿನೇಶ್ ಸಹಿತ ಸಂಸ್ಥೆ ಸಿಬ್ಬಂದಿಗಳು ಹಾಗೂ ಹಿತೈಷಿಗಳು ಹಾಜರಿದ್ದರು.