ಪುತ್ತೂರು: ಸಂಟ್ಯಾರು-ಪಾಣಾಜೆ ರಸ್ತೆಯ ಕೈಕಾರದ ವಿನಾಯಕನಗರದಲ್ಲಿ ಆ.28ರಂದು ಬೆಳಿಗ್ಗೆ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದರ ಬಗ್ಗೆ ಸಾರ್ವಜನಿಕರು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಅಳ್ವ ಮತ್ತು ವಲಯಾಧ್ಯಕ್ಷ ಗಿರೀಶ್ ರೈ ಕೈಕಾರ ಅವರ ಗಮನಕ್ಕೆ ತಂದರು.

ಬ್ಲಾಕ್ ಅಧ್ಯಕ್ಷರ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಗಿರೀಶ್ ಮತ್ತು ಅವರ ತಂಡ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.